ADVERTISEMENT

ಶಿಕ್ಷಕಿಗೆ ಗೌರವ: ಸಮಂಜಸ ನಡೆ

​ಪ್ರಜಾವಾಣಿ ವಾರ್ತೆ
Published 31 ಡಿಸೆಂಬರ್ 2019, 19:46 IST
Last Updated 31 ಡಿಸೆಂಬರ್ 2019, 19:46 IST

ದೇಶದ ಪ್ರಥಮ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರ ಜಯಂತಿ ಆಚರಣೆಯನ್ನು ಜನವರಿ 3ರಂದು ಎಲ್ಲ ಶಾಲೆಗಳಲ್ಲಿ ನಡೆಸಲು ನಿರ್ಧರಿಸಿರುವ ರಾಜ್ಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆಯ ನಡೆ ಸಮಂಜಸವಾದುದು. ಫುಲೆ ಅವರು ಹಲವಾರು ತೊಂದರೆ, ಅಡೆತಡೆಗಳು ಎದುರಾದರೂ ಭಯಪಡದೆ ತಮ್ಮ ಶಿಕ್ಷಕ ವೃತ್ತಿಯನ್ನು ನಿರ್ವಹಿಸಿದ್ದವರು. ಸರ್ಕಾರ ತಡವಾಗಿಯಾದರೂ ಅವರ ಜಯಂತಿ ಆಚರಣೆಗೆ ಮುಂದಾದುದು ಸಂತೋಷದಾಯಕ.

ಇದರ ಜೊತೆಗೆ, ಫುಲೆ ಅವರ ಹೆಸರಿನಲ್ಲಿ ವಿದ್ಯಾರ್ಥಿನಿಯರಿಗೆ ಅನುಕೂಲವಾಗುವಂತಹ ಯೋಜನೆಯೊಂದನ್ನು ಇಲಾಖೆಯು ರೂಪಿಸಬೇಕು. ಈ ಯೋಜನೆಯು ಜಾತ್ಯತೀತವಾಗಿದ್ದು, ಆರ್ಥಿಕವಾಗಿ ಹಿಂದುಳಿದಿರುವ ಕುಟುಂಬದ ಹೆಣ್ಣುಮಕ್ಕಳ ಶೈಕ್ಷಣಿಕ ಬೆಳವಣಿಗೆಗೆ ಅನುಕೂಲ ಮಾಡಿಕೊಡುವಂತೆ ಇರಬೇಕು.

-ಡಾ. ಸುನಿತಾ ಎನ್.,ಮೈಸೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.