ADVERTISEMENT

‘ಸರ್ಕಾರಿ ಶಾಲೆಯಲ್ಲಿ ಒಂದು ದಿನ’: ಕೂಗಿಗೆ ಓಗೊಡುವ ಮಾನವೀಯ ಕ್ರಮ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2019, 20:00 IST
Last Updated 11 ಸೆಪ್ಟೆಂಬರ್ 2019, 20:00 IST

ರಾಜ್ಯದ ಗಡಿ ಪ್ರದೇಶ ಮತ್ತು ಹಿಂದುಳಿದ ಜಿಲ್ಲೆಗಳ ಸರ್ಕಾರಿ ಶಾಲೆಗಳಲ್ಲಿನ ಸ್ಥಿತಿಗತಿ ಅರಿತು ಅವುಗಳಿಗೆ ಕಾಯಕಲ್ಪ ನೀಡಲು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌. ಸುರೇಶ್‌ ಕುಮಾರ್‌ ‘ಸರ್ಕಾರಿ ಶಾಲೆಯಲ್ಲಿ ಒಂದು ದಿನ’ ಕಾರ್ಯಕ್ರಮವನ್ನು ಆರಂಭಿಸಲಿರುವ ನಿರ್ಧಾರ (ಪ್ರ.ವಾ., ಸೆ.11) ಪ್ರಶಂಸಾರ್ಹ. ಗಡಿ ಭಾಗದ ವಿದ್ಯಾರ್ಥಿಗಳ ಕೂಗಿಗೆ ಓಗೊಡುವ ಅವರ ಈ ಚಿಂತನೆ ಮಾನವೀಯವಾದುದು.

ನಗರ ಪ್ರದೇಶಗಳಲ್ಲಿರುವ ಕೆಲವು ಶಾಲೆಗಳ ಸ್ಥಿತಿಯೇ ಶೋಚನೀಯವಾಗಿರುವಾಗ, ಗಡಿ ಭಾಗದ ಶಾಲೆಗಳ ಸ್ಥಿತಿಯನ್ನು ಊಹಿಸುವುದು ಕಷ್ಟ‌ಸಾಧ್ಯ. ಇಂತಹ ಸಂದರ್ಭದಲ್ಲಿ ಸಚಿವರು ಶಾಲೆಯಲ್ಲಿಯೇ ಒಂದು ರಾತ್ರಿ ಕಳೆಯುವ ಮುಖಾಂತರ, ಅಲ್ಲಿನ ಸ್ಥಿತಿಗತಿಯನ್ನು ಕಣ್ಣಾರೆ ಕಂಡು, ಪೋಷಕರಿಗೆ ತಮ್ಮ ಮಕ್ಕಳ ಭವಿಷ್ಯದ ಕುರಿತು ಇರುವಂತಹ ಕಳವಳವನ್ನು ದೂರ ಮಾಡಿ, ಸರ್ಕಾರಿ ಶಾಲೆ ಬಗ್ಗೆ ಭರವಸೆ ಮೂಡಿಸುವಂತಹ ಕಾರ್ಯ ಮಾಡಲು ಇದರಿಂದ ಸಾಧ್ಯವಾಗಲಿದೆ.

- ರುದ್ರೇಶ್ ಕೊಡಗಳ್ಳಿ,ಕೆ.ಆರ್‌.ಪೇಟೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.