ADVERTISEMENT

ಎಲ್ಲ ಮಠಗಳಲ್ಲಿ ನಡೆಯುತ್ತಿಲ್ಲವೇಕೆ?

​ಪ್ರಜಾವಾಣಿ ವಾರ್ತೆ
Published 23 ಜನವರಿ 2019, 20:00 IST
Last Updated 23 ಜನವರಿ 2019, 20:00 IST

ಸಿದ್ಧಗಂಗಾ ಶ್ರೀಗಳಂತಹ ಶಿವಯೋಗಿಗಳು ನಮ್ಮೂರಲ್ಲಿಯೂ ಇದ್ದರೆ ನಮಗೂ ಎಷ್ಟೋ ಒಳ್ಳೆಯದಾಗುತ್ತಿತ್ತು ಎಂದು ರಾಜ್ಯದ ಬಹುತೇಕರಿಗೆ ಈಗ ಅನ್ನಿಸುತ್ತಿರಬಹುದು.ಸ್ವಾಮೀಜಿಯ ದಿನನಿತ್ಯದ ಕಾರ್ಯಶೈಲಿಗಳು ಭಕ್ತರ ಮನ ಮುಟ್ಟುವಲ್ಲಿ ಯಶಸ್ವಿಯಾಗಿದ್ದಕ್ಕೆ ಶಿವಕುಮಾರ ಶ್ರೀಗಳ ಕಾಯಕ ನಿಷ್ಠೆಯೇ ಕಾರಣ.

ರಾಜ್ಯದ ಹಲವೆಡೆ ಮಠ-ಮಾನ್ಯಗಳಿದ್ದರೂ ಹೆಚ್ಚಿನವು ಕೆಲವು ಭಕ್ತರಿಗಷ್ಟೇ ಸೀಮಿತವಾಗಿವೆ. ಅನೇಕ ಮಠಾಧೀಶರು ತಮ್ಮ ಕಾಯಕ ಮರೆತಿರುವುದರಿಂದ ಗುರು-ಶಿಷ್ಯರ ಸಂಬಂಧ ಕೂಡ ದೂರವಾಗುತ್ತಾ ಸಾಗುತ್ತಿದೆ. ಸಿದ್ಧಗಂಗಾ ಮಠದ ಅನ್ನ ದಾಸೋಹ, ಅಕ್ಷರ ದಾಸೋಹ, ಭಕ್ತರ ಜೊತೆ ಬೆರೆಯುತ್ತಿದ್ದ ಶ್ರೀಗಳ ಸರಳ ಗುಣ, ಬಡ ಮಕ್ಕಳಿಗೆ ತೋರುತ್ತಿದ್ದ ಕಾಳಜಿಯಂತಹ ಚಿಂತನೆಗಳನ್ನು ಎಲ್ಲ ಮಠಗಳ ಮಠಾಧೀಶರೂ ಮೈಗೂಡಿಸಿಕೊಂಡರೆ ಸಮಾಜ ಸುಧಾರಣೆ ಸಾಧ್ಯ. ಆದರೆ ಅಂತಹ ಕಾರ್ಯ ಇತರ ಮಠಗಳಲ್ಲಿ ನಡೆಯುತ್ತಿಲ್ಲವೇಕೆ?

ಅಪ್ಪು ಶಿರೋಳಮಠ, ವಿಜಯಪುರ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.