ಈ ಬಾರಿಯ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಕಳೆದ ಬಾರಿಗಿಂತ ಹೆಚ್ಚು ವಿದ್ಯಾರ್ಥಿಗಳು ತೇರ್ಗಡೆಯಾಗಿರುವುದು ಸಂತೋಷದ ವಿಷಯ. ಆದರೆ ಸಾಮಾಜಿಕ ಜಾಲತಾಣದ ಕೆಲ ಪೇಜ್‌ಗಳಲ್ಲಿ ಜಾತಿವಾದದ ವಿಕೃತ ಮನಸ್ಸುಳ್ಳ ಕೆಲವರು ‘ನಮ್ಮ ಜಾತಿಯ ವಿದ್ಯಾರ್ಥಿ ರಾಜ್ಯಕ್ಕೆ/ಜಿಲ್ಲೆಗೆ ಟಾಪರ್’ ಎಂದು ವಿಜೃಂಭಿಸುವ ಪೋಸ್ಟ್‌ಗಳನ್ನು ಹಾಕುತ್ತಿರುವುದನ್ನು ನೋಡಿ ಬೇಸರವಾಯಿತು. ಆ ವಿದ್ಯಾರ್ಥಿಗಳ ಪ್ರತಿಭೆಯನ್ನು ಗುರುತಿಸಿ ಗೌರವಿಸಿ ಹೆಮ್ಮೆಪಡಬೇಕು. ಅದನ್ನು ಬಿಟ್ಟು ಅವರನ್ನು ಒಂದು ಜಾತಿಗೆ ಸೀಮಿತ ಮಾಡುವುದು ತರವಲ್ಲ.
ಯಾವುದೇ ವಿದ್ಯಾರ್ಥಿ ಕಷ್ಟಪಟ್ಟು ಓದಿ ಮುಂದೆ ಬರಬೇಕು, ತನ್ನ ತಂದೆ ತಾಯಿಗೆ ಒಳ್ಳೆಯ ಹೆಸರು ತರಬೇಕು ಎಂಬ ಕನಸುಗಳನ್ನು ಇಟ್ಟುಕೊಂಡು ಓದುತ್ತಾನೆಯೇ ವಿನಾ ‘ನಾನು ಆ ಜಾತಿಯವನು, ಆ ಜಾತಿಯ ಯಾದಿಯ ಮಕ್ಕಳಲ್ಲಿ ಮೊದಲಿಗನಾಗಬೇಕು’ ಎಂದಲ್ಲ. ಮುಗ್ಧ ಮಕ್ಕಳಲ್ಲಿ ಜಾತಿ ಎಂಬ ವಿಷ ಬೀಜವನ್ನು ಬಿತ್ತಿ ಸಮಾಜದ ಸ್ವಾಸ್ಥ್ಯ ವನ್ನು ಕೆಡಿಸುವ ಪ್ರಯತ್ನಗಳು ಬೇಡ. ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಇನ್ನೂ ಜಾತಿ ಎಂಬ ಚಕ್ರವ್ಯೂಹದಲ್ಲಿ ಸಿಲುಕಿ ಗಿರಕಿ ಹೊಡೆಯುತ್ತಿರುವುದು ನಿಜಕ್ಕೂ ದುರಂತ.
–ಮುರುಗೇಶ ಡಿ., ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.