ADVERTISEMENT

ವಾಚಕರ ವಾಣಿ: ಹೋಟೆಲುಗಳಿಗೆ ಪ್ರಾಣವಾಯು: ಫಲಾನುಭವಿಗೆ ದಕ್ಕಲಿ

ಎಚ್.ಎನ್.ಜಯರಾಮ್, ಹಂದಿಕುಂಟೆ.ಸಿರಾ (ತಾ)
Published 25 ಜೂನ್ 2021, 19:45 IST
Last Updated 25 ಜೂನ್ 2021, 19:45 IST

ಕೊರೊನಾದಿಂದ ಬಳಲಿದ ಹೋಟೆಲ್, ರೆಸ್ಟೊರೆಂಟ್, ರೆಸಾರ್ಟ್, ಮನರಂಜನಾ ಪಾರ್ಕ್‌ಗಳಿಗೆ ಸರ್ಕಾರ ಕೆಲವು ರಿಯಾಯಿತಿಯ ಪ್ರಾಣವಾಯು ನೀಡಿದೆ. ಏಪ್ರಿಲ್, ಮೇ, ಜೂನ್ ತಿಂಗಳ ನಿಗದಿತ ವಿದ್ಯುತ್ ಶುಲ್ಕ ಮನ್ನಾ ಮಾಡಿದೆ. ಇದು ಸ್ವಾಗತಾರ್ಹ ಹಾಗೂ ಅಭಿನಂದನಾರ್ಹ. ಜೊತೆಗೆ ಈ ವರ್ಗಗಳಿಗೆ 2021- 22ನೇ ಸಾಲಿನ ಆಸ್ತಿ ತೆರಿಗೆಯಲ್ಲಿ ಶೇ 50ರಷ್ಟು ಮನ್ನಾ ಮಾಡಿ, ಉಳಿದ ಹಣವನ್ನು ಡಿಸೆಂಬರ್‌ 31ರೊಳಗೆ ಪಾವತಿಸಲು ಸೂಚಿಸಿದೆ.

ಇಲ್ಲಿ ವಿಪರ್ಯಾಸವೆಂದರೆ, ರಾಜ್ಯದ ಬಹುತೇಕ ಹೋಟೆಲುಗಳು ಬಾಡಿಗೆ ಕಟ್ಟಡದಲ್ಲಿದ್ದು ಇದರ ಫಲ ಹೋಟೆಲ್ ನಡೆಸುವವರಿಗೆ ಸಿಗುವುದಿಲ್ಲ. ಬದಲಾಗಿ ಈ ಮೂರು ತಿಂಗಳ ಅವಧಿಯ ನೀರಿನ ತೆರಿಗೆ ಮನ್ನಾ ಮಾಡಬಹುದಿತ್ತು. ಹೋಟೆಲುಗಳನ್ನು ಎ, ಬಿ, ಸಿ, ಡಿ ಎಂದು ವರ್ಗೀಕರಿಸಿ ಪ್ರತ್ಯೇಕವಾಗಿ ತಲಾ ಇಂತಿಷ್ಟೆಂದು ಪರಿಹಾರ ಕೊಡಬಹುದಿತ್ತು. ಜೊತೆಗೆ ಹೋಟೆಲ್ ಕಾರ್ಮಿಕರಿಗೆ ಕಿಂಚಿತ್ತಾದರೂ ಧನ, ಕಿಟ್ ಸಹಾಯ ಮಾಡಬಹುದಿತ್ತು. ಇಲ್ಲೊಂದು ಸಮಸ್ಯೆ ಇದೆ. ಈಗಾಗಲೇ ನಿಯತ್ತಿನಿಂದ ಆಸ್ತಿ ತೆರಿಗೆ ಪಾವತಿಸಿರುವವರಿಗೆ ಶೇ 50 ಹಣ ಹಿಂದಿರುಗಿಸುವ ಬಗೆ ಹೇಗೆ?

- ಕೆ.ಶ್ರೀನಿವಾಸ ರಾವ್,ಹರಪನಹಳ್ಳಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.