ADVERTISEMENT

ರಜನಿ ಗೊಂದಲದ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2019, 19:42 IST
Last Updated 11 ನವೆಂಬರ್ 2019, 19:42 IST

‘ನನಗೆ ಬಿಜೆಪಿಯ ಬಣ್ಣ ಬಳಿಯುವ ಪ್ರಯತ್ನ ನಡೆಯುತ್ತಿದೆ. ನನಗೆ ಕೇಸರಿ ಬಣ್ಣ ಬಳಿಯಲಾಗದು’ ಎಂದು ನಟ ರಜನಿಕಾಂತ್ ಹೇಳಿದ್ದಾರೆ. ರಜನಿಕಾಂತ್ ಕಳೆದ ಲೋಕಸಭಾ ಚುನಾವಣೆ ವೇಳೆ, ‘ಒಬ್ಬ ವ್ಯಕ್ತಿಯ ಮೇಲೆ ಹತ್ತು ಜನ ದಾಳಿ ನಡೆಸಿದರೆ ಬಲಿಷ್ಠ ಯಾರು’ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ್ದರು. ಇದು, ನರೇಂದ್ರ ಮೋದಿ ಅವರ ಬಗೆಗಿನ ಒಲವಾಗಿದ್ದು, ರಜನಿ ಬಿಜೆಪಿಗೆ ಸೇರುವ ನಿಲುವೂ ಆಗಿರಬಹುದೆಂದು ಅನೇಕರು ಊಹಿಸಿದ್ದರು. ಮೋದಿ ಅವರ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ರಜನಿ ಪಾಲ್ಗೊಂಡಿದ್ದರು. ಅವರ ಈ ರೀತಿಯ ಗೊಂದಲದ ಹೇಳಿಕೆಗಳು ಸ್ಪಷ್ಟ ರಾಜಕೀಯ ನಿರ್ಧಾರ ತೆಗೆದುಕೊಳ್ಳುವಲ್ಲಿ ಅವರನ್ನು ವಿಫಲವಾಗಿಸಿವೆ!

ರಜನಿ ಅವರನ್ನು ಕಮಲಹಾಸನ್ ಅವರಿಗಿಂತ ಅದ್ಭುತ ನಟ ಎನ್ನಲಾಗದು. ಆದರೆ ರಜನಿ ಸೃಷ್ಟಿಸಿದ ನಟನೆಯ ಮ್ಯಾಜಿಕ್ ಕಮಲ್ ಅವರಿಂದ ಸಾಧ್ಯವಾಗಲಿಲ್ಲ!

ಯಾರು ಯಾರನ್ನೂ ಕೇಸರಿ, ಬಿಳಿ, ಕೆಂಪು, ಹಳದೀಕರಣ ಮಾಡಲಾಗದು! ವ್ಯಕ್ತಿ ತಾನೇ ಗಳಿಸಿದ ಅನುಭವ ಹಾಗೂ ವ್ಯವಸ್ಥೆಯಿಂದ ಪಾಠ ಕಲಿಯುತ್ತಾನೆ. ಇಲ್ಲಿ ಅವನ ಅರಿವೇ ಗುರುವಾಗುತ್ತದೆ.

ADVERTISEMENT

-ಆರ್.ವೆಂಕಟರಾಜು, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.