ವಿಲೀನದ ಹೆಸರಿನಲ್ಲಿ ರಾಜ್ಯದ ಇಪ್ಪತ್ತು ಸಾವಿರಕ್ಕೂ ಹೆಚ್ಚು ಶಾಲೆಗಳನ್ನು ಮುಚ್ಚಲು ಸರ್ಕಾರ ನಿರ್ಧರಿಸಿದ ತಕ್ಷಣ, ಪ್ರಜ್ಞಾವಂತರು ಪ್ರತಿಭಟನೆ ಮಾಡಿರುವುದು ಒಳ್ಳೆಯ ನಡೆ.
ಸರ್ಕಾರಿ ಶಾಲೆಗಳ ಈ ದುಸ್ಥಿತಿಗೆ ಕಾರಣವಾದರೂ ಏನು? ದಿನೇ ದಿನೇ ವಿದ್ಯಾರ್ಥಿಗಳ ಸಂಖ್ಯೆ ಇಳಿಕೆಯಾಗುತ್ತಿರುವುದೇಕೆ? ಇದರಲ್ಲಿ ಶಿಕ್ಷಕರು, ಸಮಾಜ, ಅಧಿಕಾರಿಗಳ ಪಾತ್ರ ಎಷ್ಟು? ಎಂಬ ಬಗ್ಗೆ ಯಾರೂ ಚಿಂತನೆ
ನಡೆಸಿದಂತಿಲ್ಲ.
ಶಾಲೆಗೆ ಹೋಗಬೇಕಾದ ಕೆಲವು ಶಿಕ್ಷಕರು ಬೇರೆಬೇರೆ ವ್ಯವಹಾರಗಳಲ್ಲಿ ತೊಡಗಿಕೊಂಡಿದ್ದಾರೆ, ರಾಜಕಾರಣಿಗಳ ಕಿಂಬಾಲಕರಾಗಿದ್ದಾರೆ. ಇವರಿಂದಾಗಿ ಇತರ ಶಿಕ್ಷಕರಿಗೂ ಕೆಟ್ಟ ಹೆಸರು ಬರುತ್ತಿದೆ. ಇಂಥ ಕೆಲವು ಶಿಕ್ಷಕರನ್ನು ಕಂಡ ಊರಿನ ಜನರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳುಹಿಸುತ್ತಾರೆ. ಸರ್ಕಾರ ಇಂಥ ಶಿಕ್ಷಕರನ್ನು ಗುರುತಿಸಿ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು. ಸರ್ಕಾರಿ ಶಾಲೆಗಳು ಹಿಂದಿನ ವೈಭವವನ್ನು ಪುನಃ ಪಡೆಯುವಂತಾಗಬೇಕು.
–ಮಂಜುನಾಥ ಸು.ಮ., ಚಿಂತಾಮಣಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.