ADVERTISEMENT

ವಾಚಕರ ವಾಣಿ | ನಕಲಿ ಶಿಕ್ಷಕನಿಂದ ನೀತಿ ಬೋಧೆ ಸಾಧ್ಯವೇ?

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2022, 19:30 IST
Last Updated 25 ಮಾರ್ಚ್ 2022, 19:30 IST

24 ವರ್ಷಗಳ ಹಿಂದೆ ಮೃತ ಅಣ್ಣನ ಹೆಸರಿನಲ್ಲಿ ಶಿಕ್ಷಕನಾಗಿ ಕೆಲಸಕ್ಕೆ ಸೇರಿ ಸರ್ಕಾರದ ಎಲ್ಲ ಸವಲತ್ತುಗಳನ್ನೂ ಅನುಭವಿಸುತ್ತಾ ಬಂದ ವ್ಯಕ್ತಿ, ಈಗಷ್ಟೇ ಬಂಧನಕ್ಕೆ ಒಳಗಾಗಿರುವ ಸುದ್ದಿ (ಪ್ರ.ವಾ., ಮಾರ್ಚ್‌ 25) ಓದಿ ದಿಗ್ಭ್ರಮೆಯಾಯಿತು. ಸಮಾಜದ ನೈತಿಕ ಮಟ್ಟ ಎಷ್ಟು ಅಧೋಗತಿಗೆ ಇಳಿಯುತ್ತಿದೆ ಎಂಬುದಕ್ಕೆ ಇದೊಂದು ಉದಾಹರಣೆಯಾಗಿದೆ. ಎರಡೂವರೆ ದಶಕಗಳಿಂದಲೂ ಸರ್ಕಾರದ ಕಣ್ಣಿಗೆ ಮಣ್ಣೆರಚುತ್ತಿದ್ದರೂ ಶಿಕ್ಷಣ ಇಲಾಖೆಯ ಗಮನಕ್ಕೆ ಅದು ಬಾರದಿದ್ದುದು ಅಚ್ಚರಿಯ ಸಂಗತಿ. ಒಂದೊಮ್ಮೆ ಗೊತ್ತಿದ್ದರೂ ಅದರ ಬಗ್ಗೆ ಸಂಬಂಧಿಸಿದವರು ಸರ್ಕಾರಕ್ಕೆ ಮಾಹಿತಿ ನೀಡಿಲ್ಲವೆಂದರೆ ಅದಕ್ಕೆ ಇಲಾಖೆಯ ಮೇಲಧಿಕಾರಿಗಳೇ ಹೊಣೆಗಾರರಾಗುತ್ತಾರೆ.

ಅಷ್ಟಕ್ಕೂ ತನ್ನ ಹೆಸರನ್ನೇ ಮರೆಮಾಚಿ ವಾಮಮಾರ್ಗದಿಂದ ಶಿಕ್ಷಕ ಹುದ್ದೆಯಲ್ಲಿ ಮುಂದುವರಿದ ವ್ಯಕ್ತಿಯು ಭಾವಿ ಪ್ರಜೆಗಳಾಗಿರುವ ಮಕ್ಕಳಿಗೆ ನ್ಯಾಯ, ನೀತಿ, ಸತ್ಯ, ನಿಷ್ಠೆ, ಪ್ರಾಮಾಣಿಕತೆಯಂಥ ವಿಚಾರಗಳನ್ನು ಬೋಧಿಸುವುದು ಸಾಧ್ಯವೇ?

–ನಾರಾಯಣರಾವ ಕುಲಕರ್ಣಿ, ಹಿರೇಅರಳಿಹಳ್ಳಿ, ಯಲಬುರ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT