ADVERTISEMENT

ಶಿಕ್ಷಕರ ಬಗ್ಗೆಯೂ ಕಾಳಜಿ ಇರಲಿ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2020, 19:45 IST
Last Updated 19 ಮಾರ್ಚ್ 2020, 19:45 IST

ಕೊರೊನಾ ವೈರಸ್ ಹರಡದಿರಲೆಂದು ರಾಜ್ಯದಲ್ಲಿ ಮುನ್ನೆಚ್ಚರಿಕೆಯಾಗಿ ಶಿಕ್ಷಣ ಇಲಾಖೆಯು ಶಾಲಾ–ಕಾಲೇಜು ಮಕ್ಕಳಿಗೆ ಇದೇ 31ರವರೆಗೆ ರಜೆ ನೀಡಿರುವುದು ಸ್ವಾಗತಾರ್ಹ. ಆದರೆ ಶಿಕ್ಷಕರಿಗೆ ರಜೆ ಕೊಡದಿರುವುದರಿಂದ ಅವರು ಪ್ರತಿದಿನವೂ ಶಾಲೆಗೆ ಹೋಗುತ್ತಿದ್ದಾರೆ. ಕೊರೊನಾ ಬರುವುದು ಮಕ್ಕಳಿಗೆ ಮಾತ್ರವೇ? ಶಿಕ್ಷಕರಿಗೆ ಬರುವುದಿಲ್ಲವೇ?

ಮಕ್ಕಳೇ ಬರದಿರುವ ಶಾಲೆಯಲ್ಲಿ ಬೆಳಗಿನಿಂದ ಸಂಜೆಯವರೆಗೆ ಶಿಕ್ಷಕರು ಮಾಡುವುದಾದರೂ ಏನು? ದಾಖಲೆ ನಿರ್ವಹಣೆ, ಬರವಣಿಗೆ ಮತ್ತಿತರ ಕೆಲಸಗಳನ್ನು ಶಿಕ್ಷಕರು ಮನೆಯಿಂದಲೇ ನಿರ್ವಹಿಸಬಹುದಲ್ಲವೇ? ಶಿಕ್ಷಣ ಸಚಿವರು ಈ ಬಗ್ಗೆ ಮತ್ತೊಮ್ಮೆ ಯೋಚಿಸಿ ತೀರ್ಮಾನ ಕೈಗೊಳ್ಳಬೇಕು.

ಹಡವನಹಳ್ಳಿ ವೀರಣ್ಣಗೌಡ,ತುಮಕೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.