ADVERTISEMENT

ವಾಚಕರ ವಾಣಿ | ಅನುಚಿತ ವರ್ತನೆ: ಆರಂಭದಲ್ಲೇ ಬಿಸಿ ಮುಟ್ಟಿಸಿ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2022, 19:31 IST
Last Updated 16 ಡಿಸೆಂಬರ್ 2022, 19:31 IST

ತೆಲಂಗಾಣದ ಲೈನ್‌ವುಮನ್‌ಗಳ ರೋಚಕ ಕಥೆ ಹಾಗೂ ಪಾಂಡವಪುರದ ಸರ್ಕಾರಿ ಹಾಸ್ಟೆಲ್‌ನಲ್ಲಿ ಅನುಚಿತವಾಗಿ ವರ್ತಿಸಿದ ಮುಖ್ಯ ಶಿಕ್ಷಕನಿಗೆ ವಿದ್ಯಾರ್ಥಿನಿಯರು ಅಟ್ಟಾಡಿಸಿ ಹೊಡೆದ ಸಾಹಸದ ಸುದ್ದಿಗಳು (ಪ್ರ.ವಾ., ಡಿ. 16) ಹೆಣ್ಣುಮಕ್ಕಳ ಮನೋಬಲಕ್ಕೆ ನಿದರ್ಶನವಾಗಿವೆ. ಹೆಣ್ಣು ಎಂದರೆ ಬಲಹೀನ, ಭೋಗದ ವಸ್ತು ಎಂಬ ಪುರುಷ ಪ್ರಧಾನ ಸಮಾಜದ ಧೋರಣೆಯು ಬದಲಾಗಲೇಬೇಕಾದ ಅನಿವಾರ್ಯ ಸ್ಥಿತಿಯ ಸಂದೇಶವನ್ನು ಕೊಟ್ಟಿವೆ. ಇನ್ನಾದರೂ ‘ಕೈಗೆ ಬಳೆ ತೊಟ್ಟಿಲ್ಲ’ ಎಂಬಂತಹ ಮಾತು ಹಾಗೂ ಅನುಚಿತ ವರ್ತನೆಗಳಿಗೆ ಆರಂಭದಲ್ಲೇ ಬಿಸಿ ಮುಟ್ಟಿಸಲು ಹೆಣ್ಣುಮಕ್ಕಳು ಒಂದಾಗಬೇಕಿದೆ.

- ವಿನ್ಸೆಂಟ್ ಪಿಂಟೊ,ಮಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT