ADVERTISEMENT

ಪಠ್ಯಪುಸ್ತಕಗಳು ಕಂಗೊಳಿಸಲಿ

ಮಂಜುನಾಥ ಸು.ಮ.
Published 5 ಏಪ್ರಿಲ್ 2019, 20:15 IST
Last Updated 5 ಏಪ್ರಿಲ್ 2019, 20:15 IST

ಕರ್ನಾಟಕ ಪಠ್ಯಪುಸ್ತಕ ಸಮಿತಿಯು ಪ್ರತಿವರ್ಷ ಪಠ್ಯಪುಸ್ತಕಗಳನ್ನು ಮುದ್ರಣ ಮಾಡುವ ಜವಾಬ್ದಾರಿಯನ್ನು ಹೊರುತ್ತದೆ. ಪಠ್ಯಪುಸ್ತಕಗಳಲ್ಲಿನ ಮುದ್ರಣ ದೋಷಗಳು ನಿರ್ಲಕ್ಷಿಸುವಷ್ಟು ಇದ್ದರೂ ಕಾಗದದ ಗುಣಮಟ್ಟ, ಪುಸ್ತಕಗಳಲ್ಲಿ ನೀಡಿರುವ ಚಿತ್ರಗಳು (ಅದರಲ್ಲೂ ಪ್ರಾಥಮಿಕ ಹಂತದ ಪುಸ್ತಕಗಳಲ್ಲಿ) ತೀರಾ ಕಳಪೆಯಾಗಿರುತ್ತವೆ. ಚಿತ್ರಗಳ ಮೂಲಕ ಕಲಿಯಬೇಕಾದ ವಿದ್ಯಾರ್ಥಿಗಳಿಗೆ ಈ ರೀತಿಯ ಪುಸ್ತಕಗಳನ್ನು ಮುದ್ರಿಸುವುದರಿಂದ ಕಲಿಕೆಯ ಬಗೆಗಿನ ಮಮತೆ ಕಡಿಮೆಯಾಗುತ್ತದೆ.

ಖಾಸಗಿ ಶಾಲೆಗಳಲ್ಲಿ ನೀಡುವ ವಿವಿಧ ಪುಸ್ತಕಗಳು ಉತ್ತಮ ಗುಣಮಟ್ಟದಿಂದ ಕೂಡಿರುತ್ತವೆ. ಸರ್ಕಾರಿ ಶಾಲೆಗಳ ಪುಸ್ತಕಗಳನ್ನು ಅವರು ತೆಗಳುವ ಸ್ಥಿತಿಯಲ್ಲಿ ಇರುವುದು ಅಪಮಾನಕರ. ಇದೇ ಕಾರಣಕ್ಕಾಗಿ ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸದೆ ಖಾಸಗಿ ಶಾಲೆಗೆ ಸೇರಿಸುವ ಅನೇಕ ಪೋಷಕರೂ ನಮ್ಮಲ್ಲಿದ್ದಾರೆ. ಸರ್ಕಾರಿಶಾಲೆಯಲ್ಲಿ ಸಿಗುವುದೆಲ್ಲವೂ ಗುಣಮಟ್ಟದಿಂದ ಕೂಡಿರುತ್ತದೆ ಎಂದು ಅವರಿಗೆ ನಂಬಿಕೆ ಬರುವಂತೆ ಮಾಡಬೇಕಾದದ್ದು ನಮ್ಮೆಲ್ಲರ ಕರ್ತವ್ಯ. ಆಗಮಾತ್ರ ನಮ್ಮ ಶಾಲೆಗಳು ಮಕ್ಕಳ ಹೆಚ್ಚಿನ ಹಾಜರಾತಿಯೊಂದಿಗೆ ಕಂಗೊಳಿಸುತ್ತವೆ.

- ಚಿಂತಾಮಣಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.