‘ಪರಿಶುದ್ಧ ಗಾಳಿ ನಮ್ಮ ಬದುಕಿನ ಹಕ್ಕು. ವಾಯುಮಾಲಿನ್ಯ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದರೆ ಜನರ ಬದುಕುವ ಮೂಲಭೂತ ಹಕ್ಕನ್ನು ನಿರಾಕರಿಸಿದಂತೆ’ ಎಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ನ್ಯಾಯಮೂರ್ತಿ ಎ.ಕೆ.ಗೋಯಲ್ ಅವರು ಹೇಳಿರುವುದು (ಪ್ರ.ವಾ., ಆ. 26) ಸಮಂಜಸವಾಗಿದೆ. ಪರಿಸರ ಸಂರಕ್ಷಣೆಗಾಗಿ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ರೂಪಿಸಲಾಗಿರುವ ಸುಸ್ಥಿರ ಅಭಿವೃದ್ಧಿ ನೀತಿಗಳನ್ನು ಸರ್ಕಾರ ಕಟ್ಟುನಿಟ್ಟಾಗಿ ಪಾಲಿಸಲೇಬೇಕು. ವಾಹನಗಳ ಮೂಲಕ ವಾತಾವರಣವನ್ನು ಸೇರುತ್ತಿರುವ ಇಂಗಾಲದ ಪ್ರಮಾಣವನ್ನು ಕಡಿಮೆ ಮಾಡಬೇಕಿದೆ. ಪ್ರತೀ ವಾಹನಕ್ಕೂ ಎಮಿಷನ್ ಟೆಸ್ಟ್ ಮಾಡಿಸಿ ಸುಸ್ಥಿತಿಯಲ್ಲಿ ಇರಿಸಬೇಕಾಗಿದೆ.
ಆಸ್ಟ್ರೇಲಿಯಾದಲ್ಲಿ ‘ಮನೆಗೊಂದು ವಾಹನ’ ನೀತಿಯನ್ನು ಕಡ್ಡಾಯಗೊಳಿಸಿದ್ದಾರೆ. ಆದರೆ ನಮ್ಮ ದೇಶದಲ್ಲಿ ಉಳ್ಳವರು ಮನೆಗೆ ನಾಲ್ಕೈದು ವಾಹನಗಳನ್ನು ಇಟ್ಟುಕೊಂಡಿದ್ದಾರೆ. ಕಾಲ್ನಡಿಗೆ, ಸೈಕಲ್ ಸವಾರಿಯನ್ನು ಜನ
ರೂಢಿಸಿಕೊಳ್ಳಬೇಕು. ಸೋಲಾರ್ ಆಧಾರಿತ ಮತ್ತು ಎಲೆಕ್ಟ್ರಿಕ್ ವಾಹನಗಳನ್ನು ಹೆಚ್ಚು ಪ್ರೋತ್ಸಾಹಿಸಬೇಕು. ಸಮೂಹ ಸಾರಿಗೆಯ ಬಳಕೆಯು ಹೆಚ್ಚು ಹೆಚ್ಚು ರೂಢಿಗೆ ಬರಬೇಕಾಗಿದೆ.
-ಶಿವನಕೆರೆ ಬಸವಲಿಂಗಪ್ಪ,ದಾವಣಗೆರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.