ADVERTISEMENT

ವಾಚಕರ ವಾಣಿ: ಕನ್ನಡಕದ ಅಂಗಡಿಗೆ ಬೇಕು ವಿನಾಯಿತಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2021, 18:41 IST
Last Updated 25 ಏಪ್ರಿಲ್ 2021, 18:41 IST

ವಾರಾಂತ್ಯ ಕರ್ಫ್ಯೂ ಅವಧಿಯನ್ನು ವಾರದ ಎಲ್ಲಾ ದಿನಗಳಲ್ಲೂ ಮುಂದುವರಿಸಲು ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ (ಪ್ರ.ವಾ., ಏ. 25). ಹೀಗಿರುವಾಗ, ಆ ಅವಧಿಯಲ್ಲಿ ಅಗತ್ಯ ಸೇವೆ ಎಂದು ಪರಿಗಣಿಸಿ ಕನ್ನಡಕದ ಅಂಗಡಿಗಳನ್ನು ತೆರೆದಿಡಲು ಅವಕಾಶವಿರಬೇಕು. ಕಣ್ಣಿನ ಆಸ್ಪತ್ರೆಗಳೇ ತೆರೆದಿರುವಾಗ ಕನ್ನಡಕದ ಅಂಗಡಿಗಳನ್ನು ಮುಚ್ಚಿದರೆ, ದೃಷ್ಟಿದೋಷ ಇರುವವರು ಕನ್ನಡಕಗಳನ್ನು ಪಡೆಯುವುದಾದರೂ ಹೇಗೆ?

ಹಿಂದೆ ಸೆಪ್ಟೆಂಬರ್‌ನಲ್ಲಿ ಮಿಂಟೊ ಕಣ್ಣಿನ ಆಸ್ಪತ್ರೆಯಲ್ಲಿ ಕಣ್ಣಿಗೆ ಸಂಬಂಧಿಸಿದ ಎಲ್ಲಾ ಚಿಕಿತ್ಸೆಗಳನ್ನು ಸ್ಥಗಿತಗೊಳಿಸಿದಾಗ, ನೂರಾರು ರೋಗಿಗಳು ಶಾಶ್ವತವಾಗಿ ದೃಷ್ಟಿ ಕಳೆದುಕೊಳ್ಳುವ ಆತಂಕ ಎದುರಾಗಿತ್ತು. ಆದ್ದರಿಂದ ಕರ್ಫ್ಯೂ ಅಥವಾ ಲಾಕ್‌ಡೌನ್‌ ಸಂದರ್ಭದಲ್ಲಿ ಕನ್ನಡಕದ ಅಂಗಡಿಗಳನ್ನು ತೆರೆಯಲು ಅವಕಾಶವಿರಬೇಕು.

-ಇಂದಿರಾ ಶ್ರೀಧರ್,ಮಳಲಕೆರೆ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.