ADVERTISEMENT

ಟೋಯಿಂಗ್‌: ಮಾರ್ಷಲ್‌ಗಳ ನೇಮಕವಾಗಲಿ

​ಪ್ರಜಾವಾಣಿ ವಾರ್ತೆ
Published 31 ಜನವರಿ 2022, 19:31 IST
Last Updated 31 ಜನವರಿ 2022, 19:31 IST

ವಾಹನವನ್ನು ಟೋಯಿಂಗ್‌ ಮಾಡುವ ಸ್ಥಳದಲ್ಲಿ ಸರ್ಕಾರದ ಪರವಾಗಿ ಪೊಲೀಸ್‌ ಮತ್ತು ಟೋಯಿಂಗ್ ಸಿಬ್ಬಂದಿ ಇರುತ್ತಾರೆ. ಕೆಲವೊಮ್ಮೆ ಇಬ್ಬರೂ ಸೇರಿ ದೌರ್ಜನ್ಯ ಎಸಗುತ್ತಾರೆ. ಇಲ್ಲಿ ಸಾರ್ವಜನಿಕರ ಪರವಾಗಿ ಯಾರೂ ಇರುವುದಿಲ್ಲ. ಜನ ಎಷ್ಟೇ ಬೇಡಿಕೊಂಡರೂ ಬಿಡುವುದಿಲ್ಲ. ಆದ್ದರಿಂದ ಟೋಯಿಂಗ್ ಪ್ರಕ್ರಿಯೆ ಸರಿಯಾಗಿ ನಡೆಯುತ್ತಿದೆಯೇ ಎಂದು ಖಾತರಿಪಡಿಸಿಕೊಳ್ಳಲು ಅಧಿಕೃತ ಸ್ವಯಂಸೇವಕ ಮಾರ್ಷಲ್‌ಗಳನ್ನು ನೇಮಿಸಬೇಕು. ಟೋಯಿಂಗ್ ಸರಿಯಾಗಿ ನಡೆಯುತ್ತಿದೆ ಎಂದು ಅವರು ಖಚಿತಪಡಿಸಿಕೊಂಡ ಮೇಲೆಯೇ ವಾಹನವನ್ನು ಒಯ್ಯಬಹುದು. ಅದಕ್ಕೂ ಮುಂಚೆ ವಾಹನದ ಸಂಖ್ಯೆಯನ್ನು ಮೈಕ್ ಮೂಲಕ ಘೋಷಿಸಿ, 10 ನಿಮಿಷ ಕಾಲಾವಕಾಶ ಕೊಡುವುದು ಒಳಿತು.

ಡಾ. ಎನ್.ಗೋಪಾಲಕೃಷ್ಣ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT