ADVERTISEMENT

ಮೇಲಿನಿಂದ ಇಳಿದು ಬಂದವರಲ್ಲ

ಶ್ರೀನಿವಾಸ್ ಚಕ್ರವರ್ತಿ
Published 25 ಫೆಬ್ರುವರಿ 2019, 20:17 IST
Last Updated 25 ಫೆಬ್ರುವರಿ 2019, 20:17 IST

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ 68 ಗ್ರಾಮಗಳಲ್ಲಿ ಅಸ್ಪೃಶ್ಯತೆ ತಾಂಡವವಾಡುತ್ತಿರುವ ಬಗ್ಗೆ ಮಾಧ್ಯಮ ವರದಿಗಳು ಬೆಳಕು ಚೆಲ್ಲಿವೆ.ಇಂತಹ ಆಧುನಿಕ ಯುಗದಲ್ಲೂ ಕೆಳವರ್ಗದವರ ಮೇಲೆ ಮೇಲ್ವರ್ಗದವರಿಂದ ಅನೇಕ ರೀತಿಯ ಶೋಷಣೆ ಆಗುತ್ತಿರುವುದು ಮಾನವ ಕುಲಕ್ಕೇ ಅವಮಾನ. ಬಸವಣ್ಣ, ಅಂಬೇಡ್ಕರ್‌ ಅವರಂತಹ ಮಹನೀಯರು ಅಸ್ಪೃಶ್ಯತೆ ಆಚರಣೆಯನ್ನು ಸಮಾಜದಿಂದ ಕಿತ್ತೊಗೆದರೂ ಅದರ ಬೇರು ಇನ್ನೂ ಇರುವುದು ಸಮಾಜದ ದುರ್ವಿಧಿ.

ಇಂತಹ ಅನಿಷ್ಟ ಪಿಡುಗನ್ನು ಕಿತ್ತೊಗೆದು ಈ ಶೋಷಿತರನ್ನು ಮುಕ್ತಿಗೊಳಿಸಲು ಸರ್ಕಾರ ಮುಂದಾಗಬೇಕು. ‘ಇದು ಆಧುನಿಕ ಜಗತ್ತು. ಇಲ್ಲಿ ಮೇಲು, ಕೀಳು ಯಾವುದೂ ಇಲ್ಲ. ಎಲ್ಲರೂ ಮನುಷ್ಯರೇ. ಮೇಲ್ಜಾತಿಯವರೇನು ದೇವಲೋಕದಿಂದ ಇಳಿದು ಬಂದವರಲ್ಲ. ಮನುಷ್ಯರು ಇತರ ಮನುಷ್ಯರನ್ನು ಮಾನವೀಯವಾಗಿ ಕಾಣಿ. ಮೊದಲು ನಿಮ್ಮ ಮನೋಭಾವ ಬದಲಾಯಿಸಿಕೊಳ್ಳಿ’ ಎಂದು ಇಲ್ಲಿನ ಜನರಿಗೆ ತಿಳಿ ಹೇಳಬೇಕಾಗಿದೆ.

-ಹೊಳಲು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.