ADVERTISEMENT

ಅಪಾಯಕಾರಿ ಆಚರಣೆ: ಮುನ್ನೆಚ್ಚರಿಕೆ ಇರಲಿ

​ಪ್ರಜಾವಾಣಿ ವಾರ್ತೆ
Published 26 ಜನವರಿ 2020, 19:45 IST
Last Updated 26 ಜನವರಿ 2020, 19:45 IST

ಗ್ರಾಮೀಣ ಪ್ರದೇಶಗಳಲ್ಲಿ ಸಂಕ್ರಾಂತಿಯ ಕಿಚ್ಚು ಹಾಯಿಸುವುದು, ಸಿಡಿ ಆಡುವುದು, ಕೊಂಡ ಹಾಯುವಂತಹ ಅಪಾಯಕಾರಿ ಆಚರಣೆಗಳು ಈಗಲೂ ನಡೆಯುತ್ತವೆ. ಕೊಂಡ ಹಾಯುವಾಗ ಆಯತಪ್ಪಿ ಬೆಂಕಿಯಲ್ಲಿ ಬಿದ್ದು ಪ್ರಾಣ ಕಳೆದುಕೊಂಡ ಅಥವಾ ಮೈಕೈ ಸುಟ್ಟುಕೊಂಡ ಘಟನೆಗಳು ಆಗಾಗ್ಗೆ ನಡೆಯುತ್ತಲೇ ಇರುತ್ತವೆ. ಇಂತಹ ಕಾರ್ಯಕ್ರಮಗಳು ನಡೆಯುವಾಗ, ಕಾರ್ಯಕ್ರಮ ಆಯೋಜಕರು ಅಥವಾ ಧಾರ್ಮಿಕ ಸ್ಥಳಗಳ ಮುಖ್ಯಸ್ಥರು ಅಗ್ನಿಶಾಮಕದಂತಹ ಜೀವರಕ್ಷಕ ಮುನ್ನೆಚ್ಚರಿಕೆ ಕ್ರಮಗಳಿಗೆ ವ್ಯವಸ್ಥೆ ಮಾಡಬೇಕು. ಆಗ ಈ ಬಗೆಯ ಅವಘಡಗಳನ್ನು ತಪ್ಪಿಸಬಹುದು.

– ವೆಂಕಟೇಶ ಬೈಲೂರು,ಕುಮಟಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT