ADVERTISEMENT

ಹೊಸ ಜಿಲ್ಲೆ: ಸೂಕ್ತ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2019, 19:39 IST
Last Updated 20 ಸೆಪ್ಟೆಂಬರ್ 2019, 19:39 IST

ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸ ವಿಜಯನಗರ ಜಿಲ್ಲೆಯ ರಚನೆಗೆ ರಾಜ್ಯ ಸರ್ಕಾರ ಮುಂದಾಗಿರುವುದು (ಪ್ರ.ವಾ., ಸೆ. 20) ಸ್ವಾಗತಾರ್ಹ. ರೈತರು, ಸಾಮಾನ್ಯ ಜನರು, ಕೂಲಿ ಕಾರ್ಮಿಕರು ಹಾಗೂ ಬಡವರಿಗೆ ಬಳ್ಳಾರಿ ಜಿಲ್ಲಾ ಕೇಂದ್ರವನ್ನು ತಲುಪುವುದು ಕಷ್ಟವಾಗಿದೆ.

ಜೊತೆಗೆ ಬಳ್ಳಾರಿಯು ದೊಡ್ಡ ಜಿಲ್ಲೆಯಾಗಿದೆ. ಇದರಿಂದ ಕೆಲವು ಪ್ರದೇಶಗಳು ಜಿಲ್ಲಾ ಕೇಂದ್ರಸ್ಥಾನದಿಂದ 200 ಕಿ.ಮೀ. ಅಂತರದಲ್ಲಿವೆ. ಈ ಸಮಸ್ಯೆಗಳನ್ನು ಗಮನದಲ್ಲಿ ಇಟ್ಟುಕೊಂಡು ಜಿಲ್ಲೆಯನ್ನು ವಿಭಜಿಸುವುದು ಸೂಕ್ತ ನಿರ್ಧಾರ.

- ವಿಜಯ್‌ಕುಮಾರ್ ಎಚ್.ಕೆ.,ರಾಯಚೂರು

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.