ADVERTISEMENT

ಜಲಕಂಟಕ ನಿವಾರಣೆಗೆ ಕೈಜೋಡಿಸಿ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 19:30 IST
Last Updated 4 ನವೆಂಬರ್ 2020, 19:30 IST

ವಿಶ್ವದ 100 ನಗರಗಳು 2050ರ ಹೊತ್ತಿಗೆ ಜಲಕಂಟಕ ಎದುರಿಸಲಿವೆ, ಈ ಪಟ್ಟಿಯಲ್ಲಿರುವ ಭಾರತದ 30 ನಗರಗಳ ಪೈಕಿ ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ-ಧಾರವಾಡ ಸೇರಿವೆ ಎಂದು ವರ್ಲ್ಡ್‌ವೈಡ್‌ ಫಂಡ್‌ ಫಾರ್‌ ನೇಚರ್‌ (ಡಬ್ಲ್ಯುಡಬ್ಲ್ಯುಎಫ್) ವರದಿ ಮಾಡಿ ತುರ್ತು ಕ್ರಮಕ್ಕೆ ಸೂಚಿಸಿರುವುದು (ಪ್ರ.ವಾ., ನ. 3) ಎಚ್ಚರಿಕೆಯ ಗಂಟೆಯಾಗಿದೆ. ಮಾನವ ಮತ್ತು ಸಮಸ್ತ ಜೀವಿಗಳ ಉಗಮಕ್ಕೆ ಹಾಗೂ ಉಳಿವಿಗೆ ಕಾರಣವಾದ ಜೀವಜಲವನ್ನು ಸಂರಕ್ಷಿಸಿ ಸಮೃದ್ಧಗೊಳಿಸುವ ಜವಾಬ್ದಾರಿಯುತ ಕಾರ್ಯಕ್ಕೆ ನಾವೆಲ್ಲರೂ ಮುಂದಾಗಬೇಕಿದೆ. ಸರ್ಕಾರದ ಪ್ರಯತ್ನಗಳಿಗೆ ಸಹಕರಿಸಿ ಮಳೆನೀರಿನ ಮರುಪೂರಣ, ಸಮೃದ್ಧ ಅರಣ್ಯ, ನೀರಿನ ಮಿತವ್ಯಯದಂತಹ ಕ್ರಮಗಳಿಂದ ಸೃಷ್ಟಿಯ ಅಸಮತೋಲನವನ್ನು ಕಾಪಾಡಬೇಕಾಗಿದೆ. ಇದು, ಇಂದಿನ ತುರ್ತು ಅಗತ್ಯಗಳಲ್ಲಿ ಒಂದು.

- ಚೈತನ್ಯಕುಮಾರ ಎಸ್. ಮೋಹಿತೆ,ಕನ್ನೊಳ್ಳಿ, ಜಮಖಂಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT