ADVERTISEMENT

‘ದಬ್ಬು ಸಂಸ್ಕೃತಿ’ ಸ್ಥಗಿತಗೊಳ್ಳಲಿ

ಸುಗ್ಗನಹಳ್ಳಿ ಷಡಕ್ಷರಿ
Published 28 ಏಪ್ರಿಲ್ 2019, 18:30 IST
Last Updated 28 ಏಪ್ರಿಲ್ 2019, 18:30 IST

ಮಾಧ್ಯಮಿಕ ಮತ್ತು ಪ್ರೌಢಶಾಲಾ ಮಟ್ಟದಲ್ಲಿ ಶೈಕ್ಷಣಿಕ ದುಃಸ್ಥಿತಿ ಕುರಿತು ವರದಿ ಪ್ರಕಟವಾಗಿದೆ (ಪ್ರ.ವಾ., ಏ.25). ಆದರೆ ಈ ದುಃಸ್ಥಿತಿ ಪಿಯುಸಿ ಹಂತದಲ್ಲೂ ಇದೆ. ಅದರಲ್ಲೂ ನಗರ ಪ್ರದೇಶಗಳ ಕನ್ನಡ ವಿದ್ಯಾರ್ಥಿಗಳ ಸ್ಥಿತಿ ಕೇಳುವುದೇ ಬೇಡ.

ಹತ್ತು ವರ್ಷ ಕನ್ನಡ ಕಲಿತು ಪಿಯುಸಿಗೆ ಬರುವ ವಿದ್ಯಾರ್ಥಿಗಳಿಗೆ ವರ್ಣಮಾಲೆ ಗೊತ್ತಿರುವುದಿಲ್ಲ. ಅತ್ತಿಗೆ ಎಂದು ಯಾರನ್ನು ಕರೆಯಬೇಕು, ಅತ್ತೆ-ಮಾವ ಅಂದರೆ ಯಾರು ಎನ್ನುವುದೂ ಕೆಲವರಿಗೆ ಗೊತ್ತಿರುವುದಿಲ್ಲ. ಇಂತಹ ಸ್ಥಿತಿಗೆ ಕಾರಣ ಯಾರು ಎಂದು ಯೋಚನೆ ಮಾಡಬೇಕು. ಶಾಲಾ ಹಂತದಲ್ಲಿ ಕಟ್ಟುನಿಟ್ಟಿನ ಶಿಕ್ಷಣ ಆಗಬೇಕು. ಬುಡದಿಂದಲೇ ನಮ್ಮ ಶಿಕ್ಷಣ ವ್ಯವಸ್ಥೆ ಬದಲಾಗಬೇಕು. ಮುಂದಿನ ತರಗತಿಗೆ ‘ದಬ್ಬು ಸಂಸ್ಕೃತಿ’ಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ವಿದ್ಯಾವಂತ ಪ್ರಜೆಗಳು ತಯಾರಾಗುವುದಿಲ್ಲ, ಬದಲಾಗಿ ಕೇವಲ ಪದವೀಧರ ಪ್ರಜೆಗಳು ತಯಾರಾಗುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT