ADVERTISEMENT

‘ಚೀತಾ ಫೈಟ್‌’ ಈಗೇಕೆ?

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2022, 15:16 IST
Last Updated 20 ಸೆಪ್ಟೆಂಬರ್ 2022, 15:16 IST

ಚೀತಾ ಬಗೆಗಿನ ಟೀಕಾ ವಿನಿಮಯ ನೋಡಿ ಬಾಲ್ಯ ನೆನಪಾಯಿತು- ಆಗ ಒಂದು ಬೆಂಕಿಕಡ್ಡಿ ಪೊಟ್ಟಣಕ್ಕೆ ಚೀತಾ ಫೈಟ್‌ (Cheetah fight) ಎಂಬ ಹೆಸರಿತ್ತು. ನಮಗೆ ಅದರ ಮೇಲಿರುವುದು ಹುಲಿಯೋ ಚಿರತೆಯೋ ಗೊತ್ತಿರಲಿಲ್ಲ. ಈಗ ಚೀತಾವನ್ನು ವಿದೇಶದಿಂದ ತಂದ ಹಿರಿಮೆಯ ಬಗೆಗೆ ಜಗಳವಾಡುತ್ತಿದ್ದಾರೆ. ಬೆಂಕಿ ಸುಲಭವಾಗಿ ಹತ್ತುವುದು ಆಗ ಮುಖ್ಯವಾಗಿತ್ತು, ತಂದ ಪ್ರಾಣಿಗಳು ಉಳಿಯಬಲ್ಲವಾ ಎನ್ನುವುದು ಈಗ ಮುಖ್ಯ.

ವನ್ಯಮೃಗ ಸಂರಕ್ಷಣೆಯಲ್ಲಿ ವಲ್ಮೀಕ್ ಥಾಪರ್ ತುಂಬಾ ಅನುಭವಿ. ಅವರು ಟಿ.ವಿ. ಸಂದರ್ಶನವೊಂದರಲ್ಲಿ ‘ನಾಯಿ, ಕತ್ತೆಕಿರುಬ, ಚಿರತೆಗಳು (leopard) ಚೀತಾಗಳನ್ನು ಕೊಲ್ಲಬಹುದು. ಅವು ವೇಗವಾಗಿ ಓಡಲು ತಕ್ಕ ಹುಲ್ಲುಗಾವಲು ಇಲ್ಲ. ಅವುಗಳ ಆಹಾರಕ್ಕಾಗಿ ಕೃಷ್ಣಮೃಗ, ಚಿಂಕಾರಾಗಳನ್ನು ಮೊದಲೇ ಸಾಕಬೇಕಿತ್ತು. ಚಿಕ್ಕೆ ಜಿಂಕೆಗಳನ್ನು ಬೇಟೆಯಾಡಲು ಹೋದಾಗ ಗಾಯಗೊಂಡರೆ ಸಾಯುವಷ್ಟು ಮೃದು ಪ್ರಾಣಿ ಅದು’ ಎಂದಿರುವುದು ಗಮನಾರ್ಹ. ಹಿಂದೆ ರಾಜರು ಅವುಗಳನ್ನು ಸಾಕಿ, ತರಬೇತಿ ನೀಡಿ, ಜಿಂಕೆಗಳನ್ನು ಬೇಟೆಯಾಡಲು ಉಪಯೋಗಿಸುತ್ತಿದ್ದುದು ತಿಳಿದ ಸಂಗತಿಯೇ.

ಒಟ್ಟಿನಲ್ಲಿ ಚೀತಾಗಳು ಪ್ರದರ್ಶನಕ್ಕಾಗಿ ಅಲ್ಲ. ಮೂರು ತಿಂಗಳ ಅವಧಿ ಅವು ವಾತಾವರಣಕ್ಕೆ ಹೊಂದಿಕೊಳ್ಳಲು ಸಾಕಾಗಲಾರದು. ಸಿಂಹಗಳನ್ನು ವರ್ಗಾಯಿಸುವ ವಿಷಯ ಸುಪ್ರೀಂ ಕೋರ್ಟ್‌ಗೆ ಹೋದಂತೆ ಈ ಆಮದು ವಿಷಯವೂ ಆಗದಿರಲಿ.

ADVERTISEMENT

ಎಚ್.ಎಸ್.ಮಂಜುನಾಥ,ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.