ADVERTISEMENT

ವಾಚಕರ ವಾಣಿ | ಅಂಬೇಡ್ಕರ್‌ ಸಂದೇಶ ಮರೆಮಾಚಿದ್ದೇಕೆ?

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2020, 19:30 IST
Last Updated 14 ಆಗಸ್ಟ್ 2020, 19:30 IST

‘ಕಾಳಾರಾಮನಿಂದ ಅಯೋಧ್ಯಾರಾಮನವರೆಗೆ’ ಎಂಬ ಲೇಖನದಲ್ಲಿ (ಸಂಗತ, ಆ. 6), ಡಾ. ಅಂಬೇಡ್ಕರ್ ಅವರು ಕಾಳಾರಾಮ ಮಂದಿರ ಪ್ರವೇಶಕ್ಕಾಗಿ ನಡೆಸಿದ ಚಳವಳಿಗೆ ಲೇಖಕ ವಾದಿರಾಜ ಅವರು ಕೊಟ್ಟಿರುವ ಕಾರಣ ಸತ್ಯಕ್ಕೆ ದೂರವಾಗಿದೆ. ವಾಲ್ಮೀಕಿ ವಿರಚಿತ ರಾಮಾಯಣವನ್ನು ಲೇಖಕರು ತಮ್ಮ ಮೂಗಿನ ನೇರಕ್ಕೆ ಎಷ್ಟು ಬೇಕೋ ಅಷ್ಟನ್ನು ಆಯ್ದುಕೊಂಡು ಓದುಗರ ಮನಸ್ಸು ಕದಲಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಅಂಬೇಡ್ಕರ್ ಅವರೇ ಬರೆದಿರುವ ‘ಹಿಂದೂ ಧರ್ಮದ ಒಗಟುಗಳು’ ಎಂಬ ಗ್ರಂಥದಲ್ಲಿ ರಾಮ– ಕೃಷ್ಣರ ಬಗೆಗಿನ ಅವರ ನಿಲುವುಗಳನ್ನು ತಿಳಿದುಕೊಳ್ಳದೆ, ಡಾ. ಶಂಕರರಾವ್ ಕಾರತ್ ಅವರ ಪುಸ್ತಕದಲ್ಲಿ ದಾಖಲಾದ ಅಂಶಗಳನ್ನಷ್ಟೇ ಎತ್ತಿ ತೋರಿಸಲು ಹೊರಟಿದ್ದು ಯಾಕೆ?

‘ಕಾಳಾರಾಮ ಮಂದಿರ ಪ್ರವೇಶಿಸಿದ ಮಾತ್ರಕ್ಕೆ ನಾನಾಗಲೀ ನನ್ನ ಸಮುದಾಯವಾಗಲೀ ಶೈಕ್ಷಣಿಕವಾಗಿ, ಆರ್ಥಿಕವಾಗಿ ಉದ್ಧಾರ ಆಗುತ್ತದೆ ಎಂಬ ಭ್ರಮೆ ಅಥವಾ ದೈವಿಕ ನಂಬಿಕೆ ನನಗಿಲ್ಲ. ಆದರೆ, ಸಾಮಾಜಿಕ ಸಮಾನತೆ ಸಾಧಿಸುವುದೇ ಈ ಚಳವಳಿಯ ಮುಖ್ಯ ಉದ್ದೇಶ’ ಎಂದು ಹೇಳಿದ ಅಂಬೇಡ್ಕರ್ ಅವರ ಸಂದೇಶವನ್ನು ಮರೆಮಾಚಿದ್ದರ ಔಚಿತ್ಯವೇನು?

-ಟಿ.ಶಶಿಧರ, ರಸ್ತಾಪುರ, ಶಹಾಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT