ADVERTISEMENT

ವಾಚಕರ ವಾಣಿ: ಉದಾರ ದಾನಿಗಳ ಹೃದಯಸ್ಪರ್ಶಿ ನಡೆ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2020, 19:30 IST
Last Updated 11 ನವೆಂಬರ್ 2020, 19:30 IST

ಪ್ರತೀ ಬಾರಿ ದೇಶದ ಸಿರಿವಂತರ ಪಟ್ಟಿಯನ್ನಷ್ಟೇ ನೋಡುತ್ತಿದ್ದ ನಮಗೆ, ಉದಾರವಾಗಿ ದಾನ ನೀಡಿದವರ ಬಗೆಗಿನ ಸುದ್ದಿ (ಪ್ರ.ವಾ., ನ. 11) ವಿಶೇಷ ಹಾಗೂ ಹೃದಯಸ್ಪರ್ಶಿ ಎನಿಸಿತು. ತಮ್ಮ ದುಡಿಮೆಯ ಒಂದಷ್ಟು ಪಾಲನ್ನು ಸಮಾಜದ ಒಳಿತಿಗಾಗಿ ಬಳಸಿದ ವಿಪ್ರೊ ಕಂಪನಿಯ ಅಜೀಮ್ ಪ್ರೇಮ್‌ಜಿ, ಎಚ್‌ಸಿಎಲ್‌ ಟೆಕ್ನಾಲಜೀಸ್‌ನ ಸ್ಥಾಪಕ ಶಿವ ನಾಡಾರ್‌ ಮುಂತಾದವರ ಬಗ್ಗೆ ಹೆಮ್ಮೆ ಎನಿಸುತ್ತದೆ. ಮಕ್ಕಳು, ಮೊಮ್ಮಕ್ಕಳ ಸಲುವಾಗಿ ಕೂಡಿಡುವ ಜನರ ಮಧ್ಯೆ, ತಮ್ಮ ದುಡಿಮೆಯ ಹಣದ ಕೆಲ ಪಾಲನ್ನು ದುರ್ಬಲರ ಏಳಿಗೆಗಾಗಿ ನೀಡುವ ಕೈ ಪರಮ ಶ್ರೇಷ್ಠ. ಎಲ್ಲಿ ಪರರ ಕಷ್ಟಗಳಿಗೆ ಮಿಡಿಯುವ ಮನಸ್ಸಿರುತ್ತದೆಯೋ ಅಲ್ಲಿ ಮಾತ್ರ ಸಹಕಾರ ಹುಟ್ಟಲು ಸಾಧ್ಯ.

–ಶ್ವೇತಾ ಎನ್. ಸೊರಬ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT