ಮಥುರಾದಲ್ಲಿ ಮದ್ಯ, ಮಾಂಸ ಮಾರಾಟ ನಿಷೇಧಿಸಲು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಮುಂದಾಗಿದ್ದಾರೆ (ಪ್ರ.ವಾ., ಸೆ. 1). ಮುಖ್ಯಮಂತ್ರಿಯಾದವರು ಸಾರ್ವಜನಿಕರ ಹಿತಾಸಕ್ತಿಯಂತೆ ನಡೆಯಬೇಕೇ ವಿನಾ ತಮ್ಮ ಇಷ್ಟದಂತೆ ಅಲ್ಲ. ಧಾರ್ಮಿಕ ಸ್ಥಳಗಳಲ್ಲಿ ಮಾಂಸಾಹಾರ ಅಥವಾ ಮದ್ಯ ವರ್ಜ್ಯ ಎಂದರೆ, ಮುಂದೆ ಅಲ್ಲಿಗೆ ಭೇಟಿ ನೀಡುವವರ ಸಂಖ್ಯೆಯೇ ಕಡಿಮೆಯಾಗಬಹುದು.
ಅದಲ್ಲದೆ ರಾಜ್ಯದ ಅಯೋಧ್ಯೆ, ಚಿತ್ರಕೂಟ ಮುಂತಾದ ಧಾರ್ಮಿಕ ನಗರಗಳಲ್ಲೂ ಇಂತಹ ನಿಷೇಧ ಮುಂದುವರಿಸಲು ಸರ್ಕಾರ ಚಿಂತನೆ ನಡೆಸಿರುವುದನ್ನು ನೋಡಿದರೆ, ಮೊಹಮ್ಮದ್ ಬಿನ್ ತುಘಲಕನ ಆಡಳಿತ ನೆನಪಿಗೆ ಬರುತ್ತದೆ. ಸನ್ಯಾಸಿಯಾಗಿರುವ ಆದಿತ್ಯನಾಥ ಅವರು ಜನರೆಲ್ಲಾ ಸನ್ಯಾಸಿಯಾಗಬೇಕೆಂದು ಬಯಸಿದಂತಿದೆ. ಯಾವುದೇ ಧಾರ್ಮಿಕ ಸ್ಥಳಗಳಲ್ಲೂ ಇಲ್ಲದ ಹೊಸ ಯೋಜನೆಯಿಂದ ಸರ್ಕಾರದ ಬೊಕ್ಕಸಕ್ಕೆ ನಷ್ಟದ ಜೊತೆಗೆ ಜನರ ಇಷ್ಟಕ್ಕೆ ವಿರುದ್ಧವಾಗಿ ನಡೆದಂತೆಯೂ ಆಗುತ್ತದೆ. ಇಂತಹ ನಡೆ ಸರಿಯಲ್ಲ.
-ಬಾಲಕೃಷ್ಣ ಎಂ.ಆರ್., ಬೆಂಗಳೂರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.