ADVERTISEMENT

ಯುವ ಐಕಾನ್‌ಗಳು!

ಎಸ್.ಕೆ.ಕುಮಾರ್
Published 22 ಏಪ್ರಿಲ್ 2019, 20:01 IST
Last Updated 22 ಏಪ್ರಿಲ್ 2019, 20:01 IST

‘ಕಾಫಿ ವಿತ್ ಕರಣ್ ಕಾರ್ಯಕ್ರಮದಲ್ಲಿ ಆಕ್ಷೇಪಾರ್ಹ ಹೇಳಿಕೆ– ಹಾರ್ದಿಕ್, ರಾಹುಲ್‍ಗೆ ತಲಾ ₹20 ಲಕ್ಷ ದಂಡ’ (ಪ್ರ.ವಾ., ಏ.21). ಎಲ್ಲರೂ ಬಯಸಿದಂತೆ, ಎಲ್ಲವೂ ‘ಸುಖಾಂತ್ಯ’ವಾಗಿದೆ! ವರ್ಲ್ಡ್ ಕಪ್‌ಗೆ ಆಯ್ಕೆ, ಒಂದು ‘ಭಾರಿ’ (!) ಮೊತ್ತದ ದಂಡ. ಇನ್ನೂ ‘ಹುಡುಗರು’, ‘ಜೀವನದಲ್ಲಿ ಬೆಳವಣಿಗೆಯ ಪಾಠ’ ಎಂದೆಲ್ಲ ಸಾಂತ್ವನ... ಇಂಥ ‘ದಿಗ್ಗಜರು’ಗಳ ಮಧ್ಯೆ, ಮಧ್ಯಮ ವರ್ಗದ ನೈತಿಕ ಅಧಃಪತನದ ಕುರಿತು ಚಿಂತೆ-ಚಿಂತನೆಯಾದರೂ ಏಕೆ ಬೇಕು, ಯಾರಿಗೆ ಬೇಕು ಮತ್ತು ಯಾರಿಗಾಗಿ ಬೇಕು?

ಈ ಇಬ್ಬರೂ ಯುವ ಐಕಾನ್‍ಗಳು ಐಪಿಎಲ್‌ನಲ್ಲಿ ಕೋಟಿಗಳಿಗೆ ಬಿಕರಿಯಾಗಿದ್ದಾರೆ. ಇಂಥ ಎಲ್ಲ ಕೂಸುಗಳೂ ಇದೀಗ ಅಗ್ದೀ ಪಶ್ಚಾತ್ತಾಪದ ಬೆಂಕಿಯಲ್ಲಿ ಬೇಯುತ್ತಿರುವುದರಿಂದ, ಇನ್ನು ಮುಂದೆ ಇಂಥ ಪ್ರಕರಣಗಳು ನಮ್ಮ ಭರತ ಖಂಡದಲ್ಲಿ ನಡೆಯಲು ಸಾಧ್ಯವೇ ಇಲ್ಲ! ತಲಾ ₹20 ಲಕ್ಷ ದಂಡ ಎಂದರೆ ಸಾಮಾನ್ಯವೇ? ಶಿವ ಶಿವಾ! ಸರಿ, ಇದಕ್ಕೆ ಪ್ರಚೋದಿಸಿದ, ಪ್ರಚೋದಿಸುತ್ತಲೇ ಇರುವ ಕರಣ್ ಜೋಹರ್‌ಗೆ ಮಾತ್ರ ಯಾವ ಶಿಕ್ಷೆಯೂ ಇಲ್ಲವೇ?

– ಕಲಬುರ್ಗಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.