ADVERTISEMENT

ಕಲಾವಿದರ ಆತ್ಮಚರಿತ್ರೆ ಆಧಾರಿತ ಕಿರುಚಿತ್ರಗಳ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2017, 19:30 IST
Last Updated 20 ಏಪ್ರಿಲ್ 2017, 19:30 IST
ಕಲಾವಿದರ ಆತ್ಮಚರಿತ್ರೆ  ಆಧಾರಿತ ಕಿರುಚಿತ್ರಗಳ ಪ್ರದರ್ಶನ
ಕಲಾವಿದರ ಆತ್ಮಚರಿತ್ರೆ ಆಧಾರಿತ ಕಿರುಚಿತ್ರಗಳ ಪ್ರದರ್ಶನ   

ನ್ಯಾಷನಲ್ ಗ್ಯಾಲರಿ ಆಫ್ ಮಾರ್ಡನ್‌ ಆರ್ಟ್ ವತಿಯಿಂದ ಕಲಾವಿದರ ಆತ್ಮಚರಿತ್ರೆ ಆಧಾರಿತ ಕಿರುಚಿತ್ರಗಳ ಪ್ರದರ್ಶನ ಆಯೋಜನೆಗೊಂಡಿದೆ.

ಗೀತಾ ನಿರ್ದೇಶನದ ಐದು ಕಿರುಚಿತ್ರಗಳು ಏ.21ರ ಶುಕ್ರವಾರ ಪ್ರದರ್ಶನಗೊಳ್ಳಲಿವೆ. ಕಲಾವಿದ ಅಚ್ಯುತನ್ ಕುದಲೂರು ಅವರ ಜೀವನಾಧರಿತ ‘ರೆಡ್ ಸಿಂಫೊನಿ’, ಆರ್.ಬಿ. ಭಾಸ್ಕರನ್ ಅವರ ಜೀವನಾಧರಿತ ‘ಎಕೋಸ್‌ ಆಫ್ ಫ್ರೀಡಂ’, ವಿದ್ಯಾಶಂಕರ್ ಸ್ತಪತಿ ಅವರ ಜೀವನಾಧರಿತ ‘ಸ್ತಪತಿ ಮಾಂಗೈ’, ಪಿ. ಪೆರುಮಾಳ್ ಅವರ ‘ಪೆರುಮಾಳ್ಸ್‌ ಪೀಪಲ್’, ಡಾ.ಅಲ್ಫಾನ್ಸೊ ಅರೂಲ್ ದೋಸ್ ಅವರ ‘ಗೋಲ್ಡನ್ ಫ್ಲೂಟ್’, ಸಿ. ಡಾಗ್ಲಸ್ ಅವರ ‘ಬ್ಲ್ಯಾಕ್ ಮಿರರ್’ ಕಿರುಚಿತ್ರ ಪ್ರದರ್ಶನವಾಗಲಿದೆ.

ಸ್ಥಳ: ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್‌ ಆರ್ಟ್, ಅರಮನೆ ರಸ್ತೆ. ಮಧ್ಯಾಹ್ನ 3ರಿಂದ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.