ADVERTISEMENT

ತಾಯಂದಿರ ದಿನಕ್ಕೆ ವಿಶೇಷ ಮ್ಯಾಜಿಕ್‌ ಶೋ ‘MAA-gic with ಜಯಂತ್’

​ಪ್ರಜಾವಾಣಿ ವಾರ್ತೆ
Published 9 ಮೇ 2025, 23:41 IST
Last Updated 9 ಮೇ 2025, 23:41 IST
   

ತಾಯಿ ಮತ್ತು ಹದಿಹರೆಯದ ಮಗನ ನಡುವಿನ ಬಾಂಧವ್ಯಕ್ಕೆ ಮ್ಯಾಜಿಕ್‌ನ ಚೌಕಟ್ಟು ಒದಗಿ ಬಂದರೆ!. ಇದು ಮನರಂಜನೆ ನೀಡುತ್ತಲೇ ಸಂಬಂಧಗಳ ಸೂಕ್ಷ್ಮಗಳನ್ನು ತಿಳಿಸುವ ವಿಶಿಷ್ಟ ಶೋ ‘MAA-gic with Jayant’. ಇದು ವಿಶ್ವ ತಾಯಂದಿರ ದಿನಾಚರಣೆ ಪ್ರಯುಕ್ತ ಮೇ 10 ಮತ್ತು 11ರಂದು ನಡೆಯಲಿದೆ.

ಮಗ ಮತ್ತು ಅವನ ತಾಯಿಯೇ ನಡೆಸಿಕೊಡುವ ಭಾರತದ ಮೊದಲ ಮತ್ತು ಏಕೈಕ ನಾಟಕೀಯ ಮ್ಯಾಜಿಕ್ ಶೋ ಇದಾಗಿದ್ದು, ದೈನಂದಿನ ಜೀವನವನ್ನು ವೇದಿಕೆಗೆ ತರುವ ಅಪರೂಪದ ಪ್ರದರ್ಶನವಾಗಿದೆ.

ಮಧ್ಯಮ ವರ್ಗದ ಭಾರತೀಯ ಕುಟುಂಬಗಳ ಚಿತ್ರಣವೊಂದು ಅನಾವರಣಗೊಳ್ಳುತ್ತ ಶೋ ಆರಂಭಗೊಳ್ಳುತ್ತದೆ. ಬ್ಯಾಸ್ಕೆಟ್‌ಬಾಲ್ ಆಟದಿಂದ ತಡವಾಗಿ ಹಿಂತಿರುಗಿದ್ದಕ್ಕಾಗಿ ತಾಯಿ ತನ್ನ ಮಗನನ್ನು ಗದರಿಸುತ್ತಾಳೆ. ಅವನು ಅವಳಿಗೆ ಗುಲಾಬಿ ಗುಚ್ಛ ನೀಡುತ್ತಿದ್ದಂತೆ, ಅವು ‘ಕಾನ್ಫೆಟ್ಟಿ’ಯಾಗಿ ಮಾಯವಾಗುತ್ತದೆ. ಹೀಗೆ ಇದು ಶೋನ ಝಲಕ್‌ ಅಷ್ಟೆ.

ADVERTISEMENT

14 ವರ್ಷದ ಪ್ರತಿಭಾನ್ವಿತ ಜಯಂತ್ ಪಟ್ವಾರಿ ಮತ್ತು ಅವರ ತಾಯಿ ನಟನೆ ಸೇರಿದ ಮ್ಯಾಜಿಕ್‌ ನೋಡುಗರನ್ನು ಸೆಳೆಯುತ್ತದೆ. ತಾಯಿ–ಮಗ ಪ್ರೀತಿ ಹಾಗೂ ಉಲ್ಲಾಸದ ಬದುಕಿನ ಅನಾವರಣವೂ ಇದೆ. ಕೇವಲ ತಂತ್ರಗಳಿಂದ ಈ ಮ್ಯಾಜಿಕ್ ಶೋ ಅನ್ನು ಹಣೆದಿಲ್ಲ. ಬದಲಿಗೆ ಕಥೆಯನ್ನುನಿ ರೂಪಿಸುತ್ತಾ, ಪ್ರತಿ ಮನೆಯ ಒಳಗೂ ನಡೆಯುವ ಘಟನೆಗಳಿಗೆ ನವಿರು ಸ್ಪರ್ಶ ನೀಡಲಾಗಿದೆ. ⇒v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.