ADVERTISEMENT

ನಿಮಗಿದು ಗೊತ್ತೇ? ಉಷ್ಣವಲಯದ ಕೆಲ ಪ್ರದೇಶಗಳಲ್ಲಿದೆ ಪಕ್ಷಿಯನ್ನೇ ತಿನ್ನುವ ಜೇಡ!

ಪ್ರಜಾವಾಣಿ ವಿಶೇಷ
Published 17 ಆಗಸ್ಟ್ 2022, 23:30 IST
Last Updated 17 ಆಗಸ್ಟ್ 2022, 23:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಸಾಮಾನ್ಯವಾಗಿ ಜೇಡ ಹೆಣೆದಿರುವ ಬಲೆಗೆ ಕೀಟಗಳು ಬೀಳುತ್ತವೆ. ಆ ಕೀಟಗಳನ್ನು ಜೇಡ ತಿಂದು ಹಾಕುತ್ತದೆ. ಆದರೆ ಉಷ್ಣವಲಯದ ಕೆಲ ಪ್ರದೇಶಗಳಲ್ಲಿರುವ ಒಂದು ಬಗೆಯ ಜೇಡ, ಪಕ್ಷಿಯನ್ನೇ ಹಿಡಿದು ತಿನ್ನುತ್ತದೆ.

ಈ ಜೇಡದ ದೇಹ ತುಂಬ ದೊಡ್ಡದಾಗಿರುತ್ತದೆ. ಇಂಥ ಜೇಡವನ್ನು ‘ಪಕ್ಷಿ ಭಕ್ಷಕ ಜೇಡ’ (Bird eating spider) ಎಂದು ಕರೆಯಲಾಗುತ್ತದೆ. ಇದು ಪಕ್ಷಿಗಳನ್ನಷ್ಟೇ ಅಲ್ಲದೆ, ಇತರ ಸಣ್ಣ ಪ್ರಾಣಿಗಳನ್ನೂ ತಿನ್ನುತ್ತದೆ.

ಈ ಜೇಡ, ಮರದ ಕೊಂಬೆಗಳ ಮೇಲೆ ಬಲೆ ಕಟ್ಟುತ್ತದೆ. ಪಕ್ಷಿ ಈ ಬಲೆಗೆ ಬಿದ್ದ ಕೂಡಲೇ ಜೇಡ ಅದರ ಮೇಲೆ ವಿಷಪೂರಿತ ದ್ರವವೊಂದನ್ನು ಸ್ರವಿಸುತ್ತದೆ. ಆಗ ಪಕ್ಷಿ ಸತ್ತು ಹೋಗುತ್ತದೆ. ಬಳಿಕ ಅದನ್ನು ನಿಧಾನವಾಗಿ ತಿನ್ನುತ್ತದೆ. ಇದು ಮನುಷ್ಯನಿಗೆ ಅಪಾಯಕಾರಿಯಲ್ಲ. ಆದರೆ ಅದು ಕಚ್ಚಿದರೆ, ತುಂಬ ನೋವಾಗುತ್ತದೆ.

ADVERTISEMENT

ಜೇಡಗಳಲ್ಲಿ ಸುಮಾರು 3000 ಪ್ರಬೇಧಗಳಿವೆ. ಇನ್ನೂ 20,000 ಜಾತಿಗಳಿಗೆ ಸೇರಿದ ಜೇಡಗಳನ್ನು ಗುರುತಿಸಬೇಕಿದೆ. ಇವುಗಳಲ್ಲಿ ಕೆಲವು ಜಾತಿ ಗಳಿಗೆ ಸೇರಿದ ಜೇಡಗಳು ಮನುಷ್ಯನಿಗೆ ತುಂಬ ಹಾನಿಕಾರಕ. ಅಂತಹ ಅಪಾಯಕಾರಿ ಜೇಡಗಳೆಂದರೆ - ಬ್ರೌನ್ ರೆಕ್ಲೂಸ್ (Brown recluse), ಬ್ಲಾಕ್ ವಿಂಡೊ (Black window), ಬ್ರೌನ್ ವಿಂಡೊ(Brown window) ಮತ್ತು ಟರಂಟುಲ (Tarantula). ಯೂರೋಪ್‌ನ ದಕ್ಷಿಣ ಭಾಗದಲ್ಲಿ ತೋಳ ಜೇಡ(Wolf spider) ಎಂಬ ಜಾತಿಗೆ ಸೇರಿದ ಜೇಡವಿದೆ. ಇದರಷ್ಟು ಅಪಾಯಕಾರಿ ಜೇಡ ಮತ್ತೊಂದು ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.