ADVERTISEMENT

ಪ್ರಯಾಣಿಕರೇ ಗಮನಿಸಿ: ‘UTS on Mobile' ಆ್ಯಪ್ ಸೇವೆ ಸ್ಥಗಿತಕ್ಕೆ ಮುಂದಾದ ರೈಲ್ವೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2026, 12:45 IST
Last Updated 13 ಫೆಬ್ರುವರಿ 2026, 12:45 IST
   

ಬೆಂಗಳೂರು: ಭಾರತೀಯ ರೈಲ್ವೆಯು ತನ್ನ ಹಳೆಯ 'ಯುಟಿಎಸ್ ಆನ್ ಮೊಬೈಲ್' ಆ್ಯಪ್ ಸೇವೆಗಳನ್ನು 2026ರ ಮಾರ್ಚ್ 1ರಿಂದ ಹಂತ ಹಂತವಾಗಿ ಸ್ಥಗಿತಗೊಳಿಸಲಿದೆ.

'ಯುಟಿಎಸ್ ಆನ್ ಮೊಬೈಲ್' ಆ್ಯಪ್‌ನಲ್ಲಿ ಸೀಸನ್ ಟಿಕೆಟ್ ಬುಕಿಂಗ್ ಹಾಗೂ ಹೊಸ ಬಳಕೆದಾರರ ನೋಂದಣಿಯನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ಪ್ಲಾಟ್ ಫಾರ್ಮ್ ಟಿಕೆಟ್ ಬುಕಿಂಗ್ ಮತ್ತು ಆರ್-ವ್ಯಾಲೆಟ್ ಟಾಪ್-ಅಪ್ ಸೌಲಭ್ಯಗಳನ್ನು ಸಹ ಸ್ಥಗಿತಗೊಳಿಸಲಾಗಿದೆ. ಆದರೂ ಅಪ್ಲಿಕೇಶನ್ ಸದ್ಯಕ್ಕೆ ಆ್ಯಪ್‌ ಸ್ಟೋರ್ ನಲ್ಲಿ ಲಭ್ಯವಿದೆ.

'ಯುಟಿಎಸ್ ಆನ್ ಮೊಬೈಲ್' ಆ್ಯಪ್‌ನ ಇತ್ತೀಚಿನ ಆವೃತ್ತಿಯನ್ನು ಅಪ್ಡೇಟ್ ಮಾಡುವ ಅಥವಾ ಡೌನ್ಲೋಡ್ ಮಾಡುವ ಬಳಕೆದಾರರಿಗೆ ಪ್ಲಾಟ್ ಫಾರ್ಮ್ ಟಿಕೆಟ್ ಬುಕ್ ಮಾಡಲು ಅಥವಾ ಆರ್-ವ್ಯಾಲೆಟ್ ರೀಚಾರ್ಜ್ ಮಾಡಲು ಅನುಮತಿಯಿಲ್ಲ.

ADVERTISEMENT

ಕಾಯ್ದಿರಿಸದ ಟಿಕೆಟ್‌ಗಳನ್ನು ಬುಕ್ ಮಾಡಲು ಮತ್ತು ಪ್ರಯಾಣಿಕ ಸೇವೆಗಳನ್ನು ಪಡೆಯಲು ಪ್ರಯಾಣಿಕರು ರೈಲ್ಒನ್ ಆ್ಯಪ್ ಗೆ ಬದಲಾಯಿಸಲು ಭಾರತೀಯ ರೈಲ್ವೆ ಪ್ರಯಾಣಿಕರಿಗೆ ಸೂಚಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.