ನಾಯಿಗಳಿಗೆ ಪ್ರತ್ಯೇಕವಾದ ಆಹಾರ, ಉಡುಗೆ, ಆಟಿಕೆಗಳು ಸೇರಿದಂತೆ ಅಗತ್ಯ ವಸ್ತುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟು ವರ್ಷಗಳೇ ಕಳೆದಿವೆ. ಆದರೆ ಈಗ ಅಮೆರಿಕ ಮೂಲದ ‘ಅಪೊಲೊ ಪೀಕ್’ ಎಂಬ ಕಂಪೆನಿ, ನಾಯಿಗಳಿಗೆಂದೇ ವೈನ್ ತಯಾರಿಸಿ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ.
‘ನಾಯಿಗಳಿಗೆ ಅಪಾಯಕಾರಿಯಾಗಿ ಪರಿಣಮಿಸುವ ಆಲ್ಕೋಹಾಲ್ ಅಂಶ ಮತ್ತು ದ್ರಾಕ್ಷಿರಸ ಈ ವೈನ್‌ನಲ್ಲಿ ಇಲ್ಲ. ಇದನ್ನು ಸೇವಿಸಿದರೆ ನಾಯಿಗಳು ಆರಾಮವಾಗಿ, ನೆಮ್ಮದಿಯಿಂದ ಇರುತ್ತವೆ.
ಪೆಪ್ಪರ್‌ಮಿಂಟ್ ಹಾಗೂ ಕ್ಯಾಮೊಮೈಲ್ ಅನ್ನು ಭಟ್ಟಿ ಇಳಿಸಿ ಇದನ್ನು ತಯಾರಿಸಲಾಗಿದೆ’ ಎಂದು ಕಂಪೆನಿಯ ಸ್ಥಾಪಕ ಬ್ರಾಂಡಸ್ ಜವಾಲಾ ಹೇಳಿದ್ದಾರೆ. ‘ಕ್ಯಾಮೊಮೈಲ್ ಅನ್ನು ವಿಷಕಾರಿ ಎಂದು ಗುರುತಿಸಲಾಗಿದೆ. ಆದರೂ ಅಪರೂಪಕ್ಕೆ ಒಮ್ಮೆ ಬಳಸಿದರೆ ಏನೂ ಆಗುವುದಿಲ್ಲ’ ಎಂದು ಬ್ರಾಂಡಸ್ ತಿಳಿಸಿದ್ದಾರೆ. ‘ಅಪೊಲೊ ಪೀಕ್’ ಈ ಹಿಂದೆ ಬೆಕ್ಕುಗಳಿಗಾಗಿ ವೈನ್ ತಯಾರಿಸಿ ಸುದ್ದಿ ಮಾಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.