ADVERTISEMENT

ಬಿಯರ್ ಪ್ರವಾಹಕ್ಕೆ ಮೂರು ಬಲಿ!

ಪೃಥ್ವಿರಾಜ್ ಎಂ ಎಚ್
Published 6 ಜೂನ್ 2017, 19:30 IST
Last Updated 6 ಜೂನ್ 2017, 19:30 IST
ಬಿಯರ್ ಪ್ರವಾಹಕ್ಕೆ ಮೂರು ಬಲಿ!
ಬಿಯರ್ ಪ್ರವಾಹಕ್ಕೆ ಮೂರು ಬಲಿ!   

ನೀರಿನ ಪ್ರವಾಹದಲ್ಲಿ ಜನ ಕೊಚ್ಚಿಹೋಗಿರುವುದನ್ನು ಕೇಳಿದ್ದೇವೆ. ಆದರೆ 200 ವರ್ಷಗಳ ಹಿಂದೆ ಒಂದು ವಿಚಿತ್ರ ಘಟನೆ ನಡೆದಿತ್ತು. ಬಿಯರ್‌ ಪ್ರವಾಹದಲ್ಲಿ ಮೂವರು ಮೃತಪಟ್ಟಿದ್ದರು. ಲಂಡನ್‌ನ ಟಾಟೆನ್‌ಹಾಮ್ ಕೋರ್ಟ್‌ ರಸ್ತೆಯಲ್ಲಿ ಹಾರ್ಸ್‌ ಶೂ ಬ್ರೂವರಿ (ಮದ್ಯ ಉತ್ಪಾದನೆ ಮತ್ತು ಮಾರಾಟ) ಎಂಬ ಸಂಸ್ಥೆಯೊಂದು ದೊಡ್ಡ ಬ್ರೂವರಿ ನಡೆಸುತ್ತಿತ್ತು.

1814ರ ಅಕ್ಟೋಬರ್ 17ರಂದು ಸಂಸ್ಥೆಯ ಸ್ಟೋರ್‌ ರೂಮ್‌ನಲ್ಲಿದ್ದ ಬಿಯರ್ ತುಂಬಿಸಿದ್ದ  ದೊಡ್ಡ ಗಾತ್ರದ ಪೀಪಾಯಿ   ಒತ್ತಡ ಹೆಚ್ಚಾಗಿ ಒಡೆದು ಪಕ್ಕಕ್ಕೆ ವಾಲಿತು, ಪಕ್ಕದಲ್ಲೇ ಇದ್ದ ಉಳಿದ ಅನೇಕ ಪೀಪಾಯಿಗಳೂ ನೆಲಕ್ಕೆ ಉರುಳಿದವು.

ಇದರ ಪರಿಣಾಮ ಸುಮಾರು 14.70 ಲಕ್ಷ ಲೀಟರ್ ಬಿಯರ್ ರಭಸವಾಗಿ ರಸ್ತೆಗೆ ನುಗ್ಗಿತು. ಬಿಯರ್ ಪ್ರವಾಹದಿಂದ ಒಂದು ಮನೆ ಮತ್ತು ಪಬ್ ಅವಶೇಷವೂ ಉಳಿಯದ ಹಾಗೆ ಕೊಚ್ಚಿ ಹೋಯಿತು.

ADVERTISEMENT

ಆ ವೇಳೆ ಚಹಾ ಅಂಗಡಿಯೊಂದರ ಮುಂದೆ ನಿಂತಿದ್ದ ತಾಯಿ, ಮಗಳು ಮತ್ತು ಅಲ್ಲೇ ಇದ್ದ ಆರು ಹುಡುಗರು ಬಿಯರ್‌ ಪ್ರವಾಹಕ್ಕೆ ಸಿಲುಕಿದರು. ಅವರ ಪೈಕಿ ಮೂವರು ಮೃತಪಟ್ಟರು. ಮೃತರ ಸಂಬಂಧಿಕರು ನ್ಯಾಯ ಒದಗಿಸಿಕೊಡುವಂತೆ ನ್ಯಾಯಲಯಕ್ಕೆ ಮೊರೆ ಇಟ್ಟರು. 'ಇದು ಮನುಷ್ಯರ ಕೃತ್ಯ ಅಲ್ಲ, ದೈವ ನಿರ್ಣಯ' ಎಂದು ಅಭಿಪ್ರಾಯಪಟ್ಟ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.