ADVERTISEMENT

ಮರಿ ಶಿಕಾರಿ– ಅಮ್ಮನ ಕಾಳಗ

​ಪ್ರಜಾವಾಣಿ ವಾರ್ತೆ
Published 26 ಜೂನ್ 2015, 19:30 IST
Last Updated 26 ಜೂನ್ 2015, 19:30 IST
ಸುಭದ್ರ ಕೋಟೆಯಂಥ ಗೀಜಗನ ಗೂಡಲ್ಲಿ ಮರಿಗಳು ಬೆಚ್ಚಗೆ ಇರುತ್ತವೆ ಎಂದುಕೊಂಡು ಗುಟುಕು ತರಲು ಹೋದ ಅಮ್ಮನಿಗೆ, ಮರಿ ಬೇಟೆ ಆಡಲು ಬಂದಿದ್ದು ನೀಲಿ ಕೊಕ್ಕಿನ ಇಂಡಿಯನ್‌ ಟ್ರೀ ಪೈ ಎಂಬ ಹಕ್ಕಿ. ಮರಿಗೆ ಗುಟುಕು ತಂದ ಗೀಜಗನಿಗೆ ಮರಿಯೇ ತುತ್ತಾಗುವ ಆಪತ್ತು ಕಂಡು ಆಘಾತ. ಆದರೆ ಚಾಮುಂಡೇಶ್ವರಿ ಬೆಟ್ಟದ ತೊಪ್ಪಲಿನಲ್ಲಿ ಯಾವ ತಾಯಿ ಅಬಲೆಯಾದಾಳು? ಮರಿಗಾಗಿ  ಗೂಡಿಗೆ ಬಾಯಿ ಹಾಕಿದ ಹಕ್ಕಿಗೆ ದೂರದಿಂದಲೇ ಜೋರು ಮಾಡಿದ ಅಮ್ಮ, ಇಲ್ಲಿ ಶಿಕಾರಿ ಅಸಾಧ್ಯ ಎನ್ನುವಂತೆ ಮಾಡಿತು. ಗೂಡನ್ನು ಎಲ್ಲೆಡೆಯಿಂದಲೂ ಛಿದ್ರಗೊಳಿಸಲು ಯತ್ನಿಸುತ್ತಿದ್ದ ಆ ಹಕ್ಕಿಗೆ ಅಂದು ಉಪವಾಸವೇ ಗತಿಯಾಯಿತು.  ಮರಿ ಶಿಕಾರಿ ಹಾಗೂ ಅಮ್ಮನ ವಿಜಯವನ್ನು ಸೆರೆ ಹಿಡಿದವರು ವಿಶ್ವನಾಥ ಸುವರ್ಣ.

.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.