ಈಕೆ ರಷ್ಯಾದ ರೂಪದರ್ಶಿ. ಹೆಸರು ಎಕಟೆರಿನಾ ಲಿಸಿನಾ. ರಷ್ಯಾದ ಪೆಂಜಾ ನಿವಾಸಿಯಾಗಿರೋ 29ರ ಹರೆಯದ ಎಕಟೆರಿನಾ ವಿಶ್ವದ ಅತಿ ಎತ್ತರದ ಮಾಡೆಲ್ ಎಂಬ ಹೆಗ್ಗಳಿಕೆ ಪಾತ್ರ ರಾಗಿದ್ದಾರೆ. ಸರಿಸುಮಾರು 6.8 ಅಡಿ ಎತ್ತರದ ಈ ಮಾಡೆಲ್ ಸದ್ಯ ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್‌ಗೆ ಸೇರ್ಪಡೆಗೊಂಡಿದ್ದಾರೆ.
ಈಕೆ ಬಾಸ್ಕೆಟ್ ಬಾಲ್ ಆಟಗಾರ್ತಿ. 2014 ರಲ್ಲಿ ಬಾಸ್ಕೆಟ್ ಬಾಲ್‌ಗೆ ಗುಡ್ ಬೈ ಹೇಳಿ, ಮಾಡೆಲಿಂಗ್ ಕ್ಷೇತ್ರಕ್ಕೆ ಕಾಲಿಟ್ಟ ಈಕೆಯ ಕಾಲುಗಳ ಉದ್ದ 52 ಇಂಚು. ಎಕಟೆರಿನಾ ಹೆಸರಲ್ಲಿ ಇನ್ನೂ ಒಂದಷ್ಟು ದಾಖಲೆಗಳಿವೆ. ರಷ್ಯಾದಲ್ಲಿ ಅತಿ ದೊಡ್ಡ ಪಾದ ಹೊಂದಿದ ಮಹಿಳೆ ಅನ್ನೋ ಹೆಗ್ಗಳಿಕೆಯೂ ಈಕೆಯದ್ದೇ. ಇವರು 13 ನಂಬರಿನ ಚಪ್ಪಲಿ ಮತ್ತು ಶೂಗಳನ್ನು ಧರಿಸ್ತಾರಂತೆ.
2008ರ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಿದ್ದ ರಷ್ಯಾದ ಬಾಸ್ಕೆಟ್ ಬಾಲ್ ತಂಡದಲ್ಲಿ ಎಕಟೆರಿನಾ ಕೂಡ ಇದ್ದರು. ಆ ವೇಳೆ ರಷ್ಯಾ ಕಂಚಿನ ಪದಕ ಗೆದ್ದಿತ್ತು. ಇವಳ ಕುಟುಂಬದಲ್ಲಿ ಎಲ್ಲರೂ ಎತ್ತರವಾಗಿಯೇ ಇದ್ದಾರಂತೆ. ಎಕಟೆರಿನಾ ತಂದೆಯ ಎತ್ತರ 6 ಅಡಿ 5 ಇಂಚು. ತಾಯಿ ಕೂಡ 6 ಅಡಿ ಎತ್ತರವಿದ್ದಾರೆ. ಸಹೋದರ 6.6 ಅಡಿ ಎತ್ತರವಿದ್ದಾರಂತೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.