ದಕ್ಷಿಣ ಚೀನಾ ಸಮುದ್ರದ ಪ್ಯಾರಾಸೆಲ್ ದ್ವೀಪಗಳ ಮಧ್ಯಭಾಗದಲ್ಲಿ ದೈತ್ಯಾಕಾರದ ನೀಲಿ ಕುಳಿಯೊಂದನ್ನು ವಿಜ್ಞಾನಿಗಳು ಪತ್ತೆಹಚ್ಚಿದ್ದಾರೆ. ಅದರ ಆಳ ಸುಮಾರು 987 ಅಡಿ! ಇದು ಸಮುದ್ರದ ಮಧ್ಯಭಾಗದಲ್ಲಿ ಪತ್ತೆಯಾಗಿದೆ. ಈ ಹಿಂದೆ ಇಂಥದ್ದೇ ನೀಲಿ ಕುಳಿ ಪತ್ತೆಯಾಗಿತ್ತು.
ಅದನ್ನೇ ಬೃಹತ್ ಕುಳಿ ಎಂದುಕೊಳ್ಳಲಾಗಿತ್ತು. ಈಗ ಅದರ ಮೂರು ಪಟ್ಟಿನಷ್ಟು ದೈತ್ಯಾಕಾರ ಹೊಂದಿರುವ ಈ ಕುಳಿ ವಿಜ್ಞಾನಿಗಳ ಕುತೂಹಲಕ್ಕೆ ಕಾರಣವಾಗಿದೆ.
ಇದಕ್ಕೆ ‘ನೀಲಿ ಕುಳಿ’ ಎಂದು ಹೆಸರು ಬರಲು ಕಾರಣ, ಸಮುದ್ರದ ಸುತ್ತಲಿನ ನೀರು ಖಾಲಿಯಾಗಿದ್ದು, ಮಧ್ಯದಲ್ಲಿ ಇರುವ ಕುಳಿಯು, ಮೇಲಿನಿಂದ ನೋಡಿದಾಗ ನೀಲಿ ಬಣ್ಣದಲ್ಲಿ ಕಾಣಿಸುತ್ತದೆ.
ಈ ನೀಲಿ ಕುಳಿಯಲ್ಲಿ 20 ಜಾತಿಯ ಮೀನುಗಳು ಇರುವ ಬಗ್ಗೆ ವಿಜ್ಞಾನಿಗಳು ಹೇಳಿದ್ದಾರೆ. ಈ ಕುಳಿಯಲ್ಲಿ 300 ಅಡಿ ಆಳದ ನಂತರ ಆಮ್ಲಜನಕ ಇಲ್ಲವಂತೆ. ವಿಡಿಯೊ ನೋಡಲು ಈ ಲಿಂಕ್ ಬಳಸಿ: goo.gl/UxOMsr
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.