ADVERTISEMENT

ಸೌಂದರ್ಯವೇ ಮುಳುವಾದರೆ?

ಮಂಜುಶ್ರೀ ಎಂ.ಕಡಕೋಳ
Published 13 ಅಕ್ಟೋಬರ್ 2017, 19:30 IST
Last Updated 13 ಅಕ್ಟೋಬರ್ 2017, 19:30 IST
ಸೌಂದರ್ಯವೇ ಮುಳುವಾದರೆ?
ಸೌಂದರ್ಯವೇ ಮುಳುವಾದರೆ?   

ಅಂದವಾಗಿರಬೇಕೆಂದು ಬಯಸುವುದು ಹೆಣ್ಣಿನ ಸಹಜ ಗುಣ. ಅದು ಮನುಷ್ಯರಿಗಷ್ಟೇ ಅಲ್ಲ ಪಶುಪಕ್ಷಿ, ಕೀಟಗಳನ್ನು ಬಿಟ್ಟಿಲ್ಲ. ಗಂಡನ್ನು ಸೆಳೆಯಲು ಹೆಣ್ಣನ್ನು ಆಕರ್ಷಕವಾಗಿ ರೂಪಿಸಿರುವುದು ಪ್ರಕೃತಿಯ ವಿಸ್ಮಯಗಳಲ್ಲೊಂದು. ಆದರೆ, ಈ ಅಂದ ಅತಿಯಾದರೆ ಏನಾಗುತ್ತದೆ ಎಂಬುದನ್ನು ವಿಜ್ಞಾನಿಗಳ ತಂಡವೊಂದು ಅಧ್ಯಯನ ಮಾಡಿ ಅಚ್ಚರಿಯ ವಿಷಯಗಳನ್ನು ಬಹಿರಂಗಪಡಿಸಿದೆ.

ಇದಕ್ಕಾಗಿ ವಿಜ್ಞಾನಿಗಳು ಗಂಡು ಮತ್ತು ಹೆಣ್ಣು ನೊಣಗಳನ್ನು ಅಧ್ಯಯನಕ್ಕೆ ಒಳಪಡಿಸಿದ್ದರು. ಆಕರ್ಷಕ ಹೆಣ್ಣು ನೊಣದ ಸುತ್ತ ಗಂಡು ನೊಣಗಳು ಸದಾ ಗಿಜಿಗಿಡುವುದರಿಂದ ಹೆಣ್ಣು ನೊಣಕ್ಕೆ ಹೊಸ ಪರಿಸರಕ್ಕೆ ಹೊಂದಿಕೊಳ್ಳಲು ಅವಕಾಶವೇ ಸಿಗುವುದಿಲ್ಲವಂತೆ.

ಅಷ್ಟೇ ಅಲ್ಲ ಗಂಡು ನೊಣಗಳು ಸುತ್ತಲೂ ನೆರೆಯುವುದರಿಂದ ಹೆಣ್ಣು ನೊಣಕ್ಕೆ ಮೊಟ್ಟೆಯಿಡುವ ಅವಕಾಶವೂ ತಪ್ಪುತ್ತದೆ. ಇದರಿಂದ ನಿರ್ದಿಷ್ಟ ಅನುವಂಶೀಯ ಧಾತುಗಳು ಮುಂದಿನ ಸಂತಾನಕ್ಕೆ ವರ್ಗಾವಣೆ ಆಗುವುದಿಲ್ಲವೆಂದು ವಿಜ್ಞಾನಿಗಳು ‌ ಕಂಡುಕೊಂಡಿದ್ದಾರೆ.

ADVERTISEMENT

ಈ ಅಧ್ಯಯನದಲ್ಲಿ ಕಂಡುಕೊಂಡ ಮತ್ತೊಂದು ಅಂಶವೆಂದರೆ ಸೋದರ ನೊಣದ ಜತೆ ಇರುವ ಹೆಣ್ಣು ನೊಣಗಳಿಗೆ ಇತರ ಗಂಡು ನೊಣಗಳಿಂದ ಅಷ್ಟಾಗಿ ತೊಂದರೆ ಆಗುವುದಿಲ್ಲವಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.