ADVERTISEMENT

ಹಚ್ಚಿ ನೋಡಿ ‘ರೋಸ್‌ ಪ್ಯಾಕ್‌’

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2016, 19:30 IST
Last Updated 8 ಆಗಸ್ಟ್ 2016, 19:30 IST
ಹಚ್ಚಿ ನೋಡಿ ‘ರೋಸ್‌ ಪ್ಯಾಕ್‌’
ಹಚ್ಚಿ ನೋಡಿ ‘ರೋಸ್‌ ಪ್ಯಾಕ್‌’   

ಪ್ರೀತಿಯ ಸಂಕೇತವಾಗಿರುವ ಗುಲಾಬಿ ಹೂವಿನಲ್ಲಿ ಸೌಂದರ್ಯವರ್ಧಕ ಗುಣಗಳೂ ಸಾಕಷ್ಟು ಅಡಗಿವೆ. ಆದ್ದರಿಂದಲೇ ಇದರ ನೀರು (ರೋಸ್‌ ವಾಟರ್‌) ತುಂಬಾ ಪ್ರಸಿದ್ಧಿ ಪಡೆದಿರುವುದು. ಈ ಗುಲಾಬಿ ಹೂವಿನ ಎಸಳಿನ ಮಾಸ್ಕ್‌ ಅನ್ನು ನೀವೇ ತಯಾರಿಸಿಕೊಂಡು ಆರೋಗ್ಯಪೂರ್ಣ ಕಾಂತಿಯುತ ಚರ್ಮವನ್ನು ಪಡೆಯಬಹುದು.

ಅದಕ್ಕೆ ನೀವು ಮಾಡಬೇಕಿರುವುದು ಇಷ್ಟೇ. ಒಂದಿಷ್ಟು ಗುಲಾಬಿ ಹೂವಿನ ದಳಗಳು, 2–3 ಚಮಚ ಗೋಧಿ ಹಿಟ್ಟು ಹಾಗೂ 3–4 ಚಮಚ ಹಾಲು ತೆಗೆದುಕೊಳ್ಳಿ. ಈಗ ಈ ಮೂರನ್ನೂ ಮಿಕ್ಸಿಯಲ್ಲಿ ಹಾಕಿ ಪೇಸ್ಟ್‌ ತಯಾರಿಸಿಕೊಳ್ಳಿ. ಈ ಪೇಸ್ಟ್‌ ತುಂಬಾ ದಪ್ಪ ಆಯಿತು ಎನಿಸಿದರೆ ಇನ್ನು ಸ್ವಲ್ಪ ಹಾಲು ಬೆರೆಸಿ.

ಈ ಪೇಸ್ಟ್‌ ಅನ್ನು ತುಂಬಾ ದಪ್ಪ ಮಾಡದೇ ಸ್ವಲ್ಪವೇ ನೀರಿನಾಂಶ ಇರುವಂತೆ ನೋಡಿಕೊಳ್ಳಿ. ಇದನ್ನು ಕುತ್ತಿಗೆಗೆ ಮೇಲ್ಮುಖವಾಗಿ ಹಾಗೂ ಮುಖಕ್ಕೆ ವೃತ್ತಾಕಾರವಾಗಿ ಹಚ್ಚಿಕೊಳ್ಳಿ. ಇದನ್ನು ಸ್ವಲ್ಪ ಹೊತ್ತು ಹಾಗೆಯೇ ಒಣಗಲು ಬಿಡಿ. ಒಣಗಿದ ಮೇಲೆ ತೊಳೆದುಕೊಳ್ಳಿ.

ನೆನಪಿರಲಿ. ಮುಖದ ಮೇಲೆ ಯಾವುದೇ ರೀತಿಯ ಪ್ಯಾಕ್‌ ಹಾಕಿಕೊಂಡಾಗಲೂ ಮಾತನಾಡುವುದು, ನಗುವುದು ಮಾಡಲೇಬಾರದು. ಇದರಿಂದ  ನೆರಿಗೆ ಮೂಡುವ ಸಾಧ್ಯತೆ ಇರುತ್ತದೆ. ಹೀಗೆ ವಾರಕ್ಕೊಮ್ಮೆ ಮಾಡುತ್ತಾ ಬನ್ನಿ. ನಿಮ್ಮ ಮುಖದಲ್ಲಿ ಆಗುವ ಬದಲಾವಣೆ ಕಾಣಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.