ADVERTISEMENT

ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ

ವೀಣಾ ಶಂಕರ್
Published 27 ನವೆಂಬರ್ 2016, 19:30 IST
Last Updated 27 ನವೆಂಬರ್ 2016, 19:30 IST
ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ
ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ   

ಶೀರ್ಷಿಕೆಯನ್ನು ನೋಡಿ ಖುಷಿಯಾಗಬೇಡಿ. ಈ ಶೀರ್ಷಿಕೆ ಎರಡು ಅರ್ಥ ಕೊಡುವಂತಿದೆ. ನಿಜ, ಹೊರಗೆ ತಿನ್ನಿ, ಆದರೆ ಸರಿಯಾಗಿ ತಿನ್ನಿ. ಇಂದು ಎಲ್ಲರಿಗೂ ಹೊರಗಿನ ಊಟ–ತಿಂಡಿ ಅನಿವಾರ್ಯವಾಗಿದೆ. ಕೆಲವರು ಇಷ್ಟಪಟ್ಟು ತಿನ್ನಬಹುದು, ಕೆಲವರು ಅನಿವಾರ್ಯವಾಗಿ ತಿನ್ನಬಹುದು.

ಅವಿವಾಹಿತರು, ವಿದ್ಯಾರ್ಥಿಗಳು,  ಹೊರಗೆ ಕೆಲಸ ಮಾಡುವವರು, ಸ್ನೇಹಿತರ ಜೊತೆ ಭೇಟಿಯಾದಾಗ ಹೀಗೆ ಹಲವಾರು ಸಂದರ್ಭಗಳಲ್ಲಿ ಹೊರಗಿನ ಊಟ–ತಿಂಡಿ ಬೇಕು.ಇನ್ನು ಮಕ್ಕಳಿಗೂ ಹೊರಗಿನ ಊಟ– ತಿಂಡಿ ಇಷ್ಟ, ಗೃಹಿಣಿಯರಿಗೂ ಒಂದು ದಿನದ ವಿರಾಮಕ್ಕೆ ಹೊರಗಿನ ಊಟ ಬೇಕು. ಇಂತಹ ಸಂದರ್ಭಗಳಲ್ಲಿ ನಾವು ಕೆಲವು ನಿಯಮಗಳನ್ನು ಅನುಸರಿಸಿ ತಿಂಡಿ ತಿಂದರೆ ಆರೋಗ್ಯಕ್ಕೆ ಒಳ್ಳೆಯದು.

ಊಟಕ್ಕೆ 12 ಸೂತ್ರಗಳು
* ಹೋಟೆಲ್‌ನಲ್ಲಿ ಏನು ಸಿಗುತ್ತದೆ ಎಂಬುದರ ಬಗ್ಗೆ ಮೊದಲೇ ಮಾಹಿತಿ ಪಡೆದುಕೊಳ್ಳಿ.

* ಹೋಟೆಲ್‌ಗೆ ಹೋದ ನಂತರ ಮೆನು ಕಾರ್ಡ್‌ ಪಡೆದು ಓದಿಕೊಳ್ಳಿ. ಅಲ್ಲಿ ದೊರೆಯುವ ಪದಾರ್ಥಗಳ ಬಗ್ಗೆ ಮಾಹಿತಿ ಪಡೆಯಿರಿ.

* ನೀವು ಎಷ್ಟು ಮಂದಿ ಇದ್ದೀರಿ, ಯಾರಿಗೆ ಏನು ಇಷ್ಟ ಎಂಬುದನ್ನು ಗಮನಿಸಿಕೊಳ್ಳಿ. ಅಷ್ಟೇ ಆರ್ಡರ್‌ ಮಾಡಿ.

* ಕರಿದ ತಿಂಡಿಗಳನ್ನು ಸಾಧ್ಯವಾದಷ್ಟೂ ಕಡಿಮೆ ತೆಗೆದುಕೊಳ್ಳಿ. ಸೂಪ್‌, ಸಲಾಡ್‌ ಹಣ್ಣಿನ ಬುಟ್ಟಿಗಳಿಗೆ ಹೆಚ್ಚು ಒತ್ತುಕೊಡಿ.

* ಬೆಳಗಿನ ತಿಂಡಿಗೆ ದರ್ಶಿನಿಗಳು ಒಳ್ಳೆಯದು, ಇಡ್ಲಿ, ದೋಸೆ, ಪೊಂಗಲ್‌ಗಳು ಹೊಟ್ಟೆಯನ್ನೂ ತುಂಬಿಸುತ್ತವೆ. ಆರೋಗ್ಯಕ್ಕೂ ಒಳ್ಳೆಯದು.

* ರಾತ್ರಿಯ ಊಟಕ್ಕೆ ಬಫೆ ಉತ್ತಮ ಆಯ್ಕೆ ಎನಿಸದು.

* ಕೆಲವು ಹೋಟೆಲ್‌ಗಳ ಮೆನು ಕಾರ್ಡ್‌ನಲ್ಲಿ ಕ್ಯಾಲೊರಿಯ ಬಗ್ಗೆ  ಮಾಹಿತಿ ಇರುತ್ತದೆ. ಆರ್ಡರ್ ಮಾಡುವ ಮೊದಲು ಅದನ್ನೂ ಗಮನಿಸಿ.

* ಹಬೆಯಲ್ಲಿ ಬೆಂದ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು.

*  ಮೈದಾ ರೊಟ್ಟಿಗಿಂತ ಗೋಧಿ ರೊಟ್ಟಿ ಒಳ್ಳೆಯದು.

* ಸಕ್ಕರೆ ಬೆರೆಸಿದ ಜ್ಯೂಸ್‌ಗಿಂತ ನೀರು ಕುಡಿಯುವುದು ಒಳ್ಳೆಯದು.

* ಒಂದು ಊಟದಲ್ಲಿ ತಂದೂರಿ ರೊಟ್ಟಿ, ದಾಲ್‌, ಡ್ರೈಸಬ್ಜಿ, ರಾಯಿತ ಇದ್ದರೆ ಒಳ್ಳೆಯದು.

* ಉಪ್ಪು, ಸಕ್ಕರೆ, ಎಣ್ಣೆ ಅಂಶ ಕಡಿಮೆ ಇರುವ ಆಹಾರಕ್ಕೆ ಹೆಚ್ಚು ಒತ್ತು ಕೊಡಿ.

 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.