ADVERTISEMENT

500 ವರ್ಷದ ಮರ

​ಪ್ರಜಾವಾಣಿ ವಾರ್ತೆ
Published 16 ಜೂನ್ 2017, 19:30 IST
Last Updated 16 ಜೂನ್ 2017, 19:30 IST
500 ವರ್ಷದ ಮರ
500 ವರ್ಷದ ಮರ   

500 ವರ್ಷದ ಮರ
ಅಮೆರಿಕದ ಸೌಥ್‌ ಕ್ಯಾರೊಲಿನಾ ರಾಜ್ಯದ ಜಾನ್ಸ್‌ ಐಸ್‌ಲ್ಯಾಂಡ್‌ನ ಏಂಜಲ್ ಓಕ್ ಉದ್ಯಾನವದಲ್ಲಿರುವ ಓಕ್ ಮರ ಸುಮಾರು 500 ವರ್ಷಗಳಿಗೂ ಪುರಾತನವಾದುದ್ದು ಎನ್ನಲಾಗುತ್ತದೆ.

ಪ್ರಸ್ತುತ ಭೂಮಿಯ ಮೇಲಿನ ಅತ್ಯಂತ ಹಳೆಯ ಮರ ಎಂಬ ದಾಖಲೆಗೆ ಈ ಮರ ಪಾತ್ರವಾಗಿದೆ. ಕೆಲವು ಇತಿಹಾಸಕಾರರು 1717ರಲ್ಲಿ ಅಬ್ರಹಾಮ್ ವೈಟ್‌ಗೆ ದಾನವಾಗಿ ಬಂದ ಭೂಮಿಯಲ್ಲಿ ಈ ಮರ ಇತ್ತು ಎಂದು ಇತಿಹಾಸದಲ್ಲಿ ಉಲ್ಲೇಖವಿರುವುದಾಗಿ ಹಾಗೂ ಈ ಮರದ ಆಯಸ್ಸು 1500 ವರ್ಷ ಎಂದು ವಾದಿಸುತ್ತಾರೆ. 63 ಅಡಿ ಉದ್ದವಿರುವ ಈ ಮರ 17,200 ಚದರಡಿ ಜಾಗಕ್ಕೆ ನೆರಳು ನೀಡುತ್ತಿದೆ.

ಈ ಮರವು ಭೂಕಂಪನ, ಚಂಡಮಾರುತ, ಪ್ರವಾಹ ಎಲ್ಲವನ್ನೂ ಎದುರಿಸಿ ಹಾಗೆಯೇ ನಿಂತಿದೆ.

ADVERTISEMENT

**

‘ಬೇವಾಚ್‌’ ಬಾಲ್‌ ವಿಶ್ವ ದಾಖಲೆಗೆ

ಇತ್ತೀಚೆಗೆ ತೆರೆಕಂಡ ಹಾಲಿವುಡ್‌ ಸಿನಿಮಾ ‘ಬೇವಾಚ್‌’ ನೆನಪಿರಬೇಕಲ್ಲ. ಪ್ರಿಯಾಂಕಾ ಚೋಪ್ರಾ ನಟಿಸಿದ ಸಿನಿಮಾ.  ಈಗ ಏಕೆ ಈ ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ ಅಂದ್ಕೊಂಡ್ರಾ? ಅದಕ್ಕೆ ಕಾರಣ ಇಲ್ಲಿದೆ ನೋಡಿ...

ಈ ಸಿನಿಮಾ ನಿರ್ಮಿಸಿದ ಪ್ಯಾರಾಮೌಂಟ್‌ ಪಿಕ್ಚರ್ಸ್‌ ಲಂಡನ್‌ನಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ ‘ಬೇವಾಚ್‌’ನ ಪೂರ್ವ ಪ್ರದರ್ಶನದ ವೇಳೆ ಥೇಮ್ಸ್ ನದಿಯಲ್ಲಿ ಬೋಟಿನ ಮೇಲೆ ಬಹುದೊಡ್ಡ ಬೀಚ್‌ ಬಾಲ್‌ ಅನ್ನು ಪ್ರದರ್ಶನಕ್ಕಿರಿಸಿತ್ತು. ಭಾರಿ ಜನಾಕರ್ಷಣೆ ಮತ್ತು ಮೆಚ್ಚುಗೆಗೆ ಪಾತ್ರವಾಗಿದ್ದ ಈ ಬಾಲ್‌ ಈಗ ಗಿನ್ನಿಸ್‌ ವಿಶ್ವದಾಖಲೆ ಪುಸ್ತಕದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.  ಅದೂ ಹಳೆಯ ದಾಖಲೆ ಮುರಿದು!

ಬೋಟ್‌ನ ಕೆಂಪು ಹಾಸಿನ ಮೇಲೆ 19.97 ಮೀಟರ್‌ ಅಳತೆಯ ಈ ಬಾಲ್‌ ಅನ್ನು ಸಾರ್ವಜನಿಕರ ವೀಕ್ಷಣೆಗೆ ಇಡಲಾಗಿತ್ತು. ಬೀಚ್‌ ಬಾಲ್‌ ತಯಾರಿಸುವ ಉತ್ಪನ್ನಗಳಿಂದಲೇ ಈ ಬಾಲ್‌ ತಯಾರಿಸಲಾಗಿತ್ತು. ಈ ಹಿಂದೆ 15.82 ಮೀಟರ್‌ನ ಬಾಲ್‌ ಗಿನ್ನಿಸ್‌ ದಾಖಲೆಗೆ ಸೇರ್ಪಡೆಯಾಗಿತ್ತು. ಇದೀಗ ‘ಬೇವಾಚ್‌’ ಬಾಲ್‌ ಈ ದಾಖಲೆಯನ್ನು ಮುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.