ADVERTISEMENT

ಯುವಜನರಲ್ಲಿ ಹೆಚ್ಚಿದೆ ‘ಪರ್ಫೆಕ್ಟ್’ ಆಗುವ ಬಯಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2018, 19:30 IST
Last Updated 31 ಜನವರಿ 2018, 19:30 IST
ಯುವಜನರಲ್ಲಿ ಹೆಚ್ಚಿದೆ  ‘ಪರ್ಫೆಕ್ಟ್’ ಆಗುವ ಬಯಕೆ
ಯುವಜನರಲ್ಲಿ ಹೆಚ್ಚಿದೆ ‘ಪರ್ಫೆಕ್ಟ್’ ಆಗುವ ಬಯಕೆ   

ಯಾವುದೇ ವಿಷಯವಾದರೂ ಸರಿ, ‘ಪರಿಪೂರ್ಣತೆ’ ಸಾಧಿಸುವುದು ತಪಸ್ಸಿನಂತೆ. ಹಾಗೆಂದು ಅದರ ಹಿಂದೋಡುವ ಮಂದಿಯೇನು ಕಮ್ಮಿಯಿಲ್ಲ. ಇದಕ್ಕೆ ಪುಷ್ಟಿ ಕೊಡುವಂತೆ ಇತ್ತೀಚೆಗೆ ಅಧ್ಯಯನವೊಂದು ನಡೆದಿದೆ.

ಯುವಜನರಲ್ಲಿ ಪರಿಪೂರ್ಣತೆಯನ್ನು ಸಾಧಿಸುವ ಮನೋಭಾವವು 30% ಹೆಚ್ಚಿರುವುದಾಗಿ ಈ ಅಧ್ಯಯನ ತಿಳಿಸಿದೆ. ‘ಸೈಕಲಾಜಿಕಲ್ ಬುಲೆಟಿನ್‌’ನಲ್ಲಿ ಪ್ರಕಟಗೊಂಡ ಈ ಅಧ್ಯಯನದ ಪ್ರಕಾರ, ಹಲವು ಆಯಾಮಗಳಲ್ಲಿ ಯುವಜನರು ಪರಿಪೂರ್ಣತೆ ಸಾಧಿಸಲು ಹಂಬಲಿಸುತ್ತಿದ್ದಾರೆ.

ತಮ್ಮ ದೇಹದ ಬಗ್ಗೆ, ಮನಸ್ಸಿನ ಬಗ್ಗೆ, ಹಾಗೆಯೇ ಭವಿಷ್ಯದ ಆಯಾಮಗಳಲ್ಲಿ ಸದಾ ಪರ್ಫೆಕ್ಟ್ ಆಗುವುದರ ಬಗ್ಗೆಯೇ ತುಡಿಯುತ್ತಿದ್ದಾರೆ. ಕಳೆದ ಮೂರು ದಶಕಗಳಿಗೆ ಹೋಲಿಸಿದರೆ ಈ ಪರಿಪೂರ್ಣತೆಯ ಪರಿಕಲ್ಪನೆ ಈಗಿನವರಲ್ಲಿ ಹೆಚ್ಚಿದೆ ಎಂದು ತಿಳಿಸಿದೆ ಈ ಸಂಶೋಧನೆ.

ADVERTISEMENT

ಇನ್ನೊಬ್ಬರೊಂದಿಗೆ ಹೋಲಿಸಿಕೊಳ್ಳುವ, ತಮ್ಮನ್ನು ಅವರಿಗಿಂತ ಒಂದು ಪಟ್ಟು ಮೇಲಾಗಿಯೇ ಕಾಣುವ ಮನಸ್ಥಿತಿ ಬೆಳೆದಿದ್ದು, ಇದೇ ಪರ್ಫೆಕ್ಷನಿಸಂನೆಡೆಗೆ ಅವರನ್ನು ದೂಡುತ್ತಿದೆ ಎಂದೂ ವಿವರಿಸಲಾಗಿದೆ. ಹೆಚ್ಚು ಹಣ ಸಂಪಾದಿಸುವ, ಹಾಗೆಯೇ ಐಷಾರಾಮಿ ಜೀವನ ಪಡೆಯುವತ್ತಲೇ ಯುವಜನತೆಯ ಚಿತ್ತ ನೆಟ್ಟಿದೆ ಎಂದೂ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.