ADVERTISEMENT

ಪ್ರೇಮ ಪತ್ರ ಸ್ಪರ್ಧೆ – 2016

ಬಹುಮಾನ ವಿಜೇತ ಪತ್ರಗಳು ಫೆ.11ರಂದು ‘ಕಾಮನಬಿಲ್ಲು’ ಪುರವಣಿಯಲ್ಲಿ ಪ್ರಕಟವಾಗುತ್ತವೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2016, 19:53 IST
Last Updated 6 ಜನವರಿ 2016, 19:53 IST

‘ಪ್ರೇಮ ಪತ್ರ’ ಎನ್ನುವುದು ಎಲ್ಲ ಕಾಲದ ಅತ್ಯುತ್ತಮ ಸಾಹಿತ್ಯ ಎನ್ನುವುದು ಪ್ರೇಮಿಗಳ ಅನುಭವದ ಮಾತು. ಆದರೆ, ಪ್ರೇಮ ಪತ್ರ ಬರೆಯುವುದೇನು ತಮಾಷೆಯ ಮಾತಾ? ಕೊಂಚ ಭಂಡತನವಿದ್ದರೆ– ನೆಚ್ಚಿದ ಹುಡುಗನಿಗೋ ಹುಡುಗಿಗೋ ಮಾತುಗಳಲ್ಲಿ ಪ್ರೇಮ ನಿವೇದಿಸಿಕೊಳ್ಳಬಹುದು. ಆದರೆ, ಬರವಣಿಗೆಯ ವಿಷಯಕ್ಕೆ ಬಂದರೆ ಭಾವ, ವಿವೇಕ, ಮಾತು– ಎಲ್ಲವೂ ಒಟ್ಟಾಗಿ ಒಂದರ ಕಾಲನ್ನೊಂದು ಎಳೆಯತೊಡಗುತ್ತವೆ. ಬೇಕಿದ್ದರೆ ಪ್ರಯತ್ನಿಸಿ ನೋಡಿ, ನಿಮ್ಮ ಇಷ್ಟದ ಹುಡುಗ / ಹುಡುಗಿಗೆ ಪ್ರೇಮ ಪತ್ರ ಬರೆದು ನೋಡಿ.

ಈ ಬರೆಯುವ ಸವಾಲಿಗೆ ‘ಕಾಮನಬಿಲ್ಲು’ ಪ್ರೇಮಪತ್ರ ಸ್ಪರ್ಧೆಯ ನೆಪವನ್ನೂ ಒದಗಿಸಿಕೊಡುತ್ತಿದೆ. ನಿಮ್ಮ ಪತ್ರಗಳು ಫೆಬ್ರುವರಿ 14ರ ‘ಪ್ರೇಮಿಗಳ ದಿನ’ವನ್ನು ಅರ್ಥವತ್ತಾಗಿಸಲಿ ಎನ್ನುವುದು ‘ಪ್ರಜಾವಾಣಿ ಪ್ರೇಮಪತ್ರ ಸ್ಪರ್ಧೆ’ಯ ಉದ್ದೇಶ.

ಪ್ರೇಮಪತ್ರ 600 ಪದಗಳನ್ನು ಮೀರಬಾರದು. ಪತ್ರದ ಜೊತೆಗೆ ನಿಮ್ಮ ಹೆಸರು, ಅಂಚೆ ವಿಳಾಸ, ದೂರವಾಣಿ ಸಂಖ್ಯೆ ಮತ್ತು ಫೋಟೊ ಇರುವುದು ಕಡ್ಡಾಯ. ಪತ್ರಗಳು ಜನವರಿ 30ಕ್ಕೆ ಮೊದಲು ಪ್ರಜಾವಾಣಿ ಕಚೇರಿ ತಲುಪಬೇಕು. ಈ ಪತ್ರಗಳನ್ನು ಯಾವುದೇ ರೀತಿಯಲ್ಲಿ ಬಳಸಿಕೊಳ್ಳುವ ಹಕ್ಕು ‘ಪ್ರಜಾವಾಣಿ’ಗೆ ಇರುತ್ತದೆ.

* ಮೊದಲ ಬಹುಮಾನ : ₹ 3000

* ಎರಡನೇ ಬಹುಮಾನ : ₹ 2000

* ಮೂರನೇ ಬಹುಮಾನ : ₹ 1000

ಇ-ಮೇಲ್‌ನಲ್ಲಿ ಕಳುಹಿಸುವ ಪತ್ರಗಳು ನುಡಿ/ಬರಹ ಅಥವಾ ಯೂನಿಕೋಡ್ ತಂತ್ರಾಂಶದಲ್ಲಿರಲಿ. ಕಳುಹಿಸಬೇಕಾದ ವಿಳಾಸ: ಪ್ರೇಮ ಪತ್ರ ಸ್ಪರ್ಧೆ, ‘ಕಾಮನಬಿಲ್ಲು’ ವಿಭಾಗ, ಪ್ರಜಾವಾಣಿ, ನಂ.75, ಮಹಾತ್ಮ ಗಾಂಧಿ ರಸ್ತೆ, ಬೆಂಗಳೂರು-01.

ಇ-ಮೇಲ್: premapathra@prajavani.co.in

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.