ADVERTISEMENT

ಪ್ರಜಾವಾಣಿ ಕ್ವಿಜ್‌

​ಪ್ರಜಾವಾಣಿ ವಾರ್ತೆ
Published 14 ಮೇ 2017, 19:30 IST
Last Updated 14 ಮೇ 2017, 19:30 IST
1)  ರವೀಂದ್ರನಾಥ್ ಟ್ಯಾಗೋರರ 156ನೇ ಹುಟ್ಟುಹಬ್ಬದ ಅಂಗವಾಗಿ ಯಾವ ದೇಶದಲ್ಲಿ ಮೇ  8ರಿಂದ 12ರವರೆಗೂ ಭಾರತದ ಸಾಂಸ್ಕೃತಿಕ ಉತ್ಸವವನ್ನು  ಆಯೋಜಿಸಲಾಗಿತ್ತು?  
a) ಇಟಲಿ         b) ಈಜಿಪ್ಟ್
c) ಇಂಗ್ಲೆಂಡ್‌    d) ಅಮೆರಿಕ
 
2) ಕೇವಲ 39ನೇ ವಯಸ್ಸಿಗೆ ಫ್ರಾನ್ಸ್‌ನ ನೂತನ ಅಧ್ಯಕ್ಷರಾಗಿ ಯಾರು ಆಯ್ಕೆಯಾಗಿದ್ದಾರೆ ?   
a)  ಎಮ್ಯಾನುಯಲ್ ಮ್ಯಾಕ್ರನ್‌ 
b)  ಮೆಲೀನ್‌ ಲೇ ಪೆನ್‌  
c)  ಬ್ರಿಝಿತ್ ತ್ರೋನ್ಯಾಗ್ 
d) ಮಿಲನ್ ಕುಂದೇರಾ
 
3)   ಭಾರತದ ಮೊದಲ ಖಾಸಗಿ ವಲಯದ ಸಣ್ಣ ಶಸ್ತ್ರಾಸ್ತ್ರ ಕೈಗಾರಿಕಾ ಘಟಕವನ್ನು ಯಾವ ರಾಜ್ಯದಲ್ಲಿ ಸ್ಥಾಪನೆ ಮಾಡಲಾಗಿದೆ?     
a) ಉತ್ತರ ಪ್ರದೇಶ           b) ರಾಜಸ್ತಾನ
c) ಮಧ್ಯಪ್ರದೇಶ             d)  ಪಶ್ಚಿಮ ಬಂಗಾಳ
 
4)  ಸಂಸತ್ತಿನ ಸಾರ್ವಜನಿಕ ಲೆಕ್ಕಪತ್ರ ಸಮಿತಿಯ (ಪಿಎಸಿ) 21ನೇ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಗಿದೆ? 
a) ಕೆ.ವಿ. ಥಾಮಸ್‌           b) ಸುಮಿತ್ರಾ ಮಹಾಜನ್‌  
c) ನರೇಂದ್ರ ಮೋದಿ      d) ಮಲ್ಲಿಕಾರ್ಜುನ ಖರ್ಗೆ 
 
5) ಕೇಂದ್ರ ಸರ್ಕಾರ 2017ನೇ ಸಾಲಿನ ಸ್ವಚ್ಛ ಸರ್ವೇಕ್ಷಣೆ ವರದಿಯನ್ನು ಬಿಡುಗಡೆ ಮಾಡಿದ್ದು ಯಾವ ನಗರ ದೇಶದ ಅತ್ಯಂತ ಸ್ವಚ್ಛ ನಗರವಾಗಿದೆ?   
a) ಇಂಧೋರ್                 b) ಗುರುಗ್ರಾಮ
c) ಮೈಸೂರು                   d) ತಿರುವನಂತಪುರ
 
6) ದೇಶದ ಎಲ್ಲ ವಿಶ್ವವಿದ್ಯಾನಿಲಯ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಪರಮವೀರಚಕ್ರ ಕೀರ್ತಿಗೆ ಭಾಜನರಾದ ಸೈನಿಕರ ಭಾವಚಿತ್ರಗಳನ್ನು ಪ್ರದರ್ಶಿಸುವಂತೆ ಉತ್ತೇಜನ ನೀಡುವ ಅಭಿಯಾನಕ್ಕೆ ಕೇಂದ್ರ ಸರ್ಕಾರ ಚಾಲನೆ ನೀಡಿದೆ. ಈ ಅಭಿಯಾನದ ಹೆಸರು ಏನು?   
a)ವಿದ್ಯಾ - ವೀರತಾ ಅಭಿಯಾನ      
 b) ನಮ್ಮ ಸೈನಿಕರು ಅಭಿಯಾನ
c) ವಂದೇ ಮಾತರಂ ಅಭಿಯಾನ
 d) ದೇಶಭಕ್ತಿ ಅಭಿಯಾನ
 
7)  ಭಾರತದ ಎರಡನೇ ಅತಿ ಎತ್ತರದ ಧ್ವಜಸ್ತಂಭ ವನ್ನು  ಎಲ್ಲಿ ನಿರ್ಮಾಣ ಮಾಡಲಾಗಿದೆ? 
a) ಕೊಲ್ಲಾಪುರ          b) ಸೊಲ್ಲಾಪುರ
c) ನಾಗಪುರ  d) ಪುಣೆ
 
8)  ದೇಶದಲ್ಲಿ ಮೊಟ್ಟ ಮೊದಲ ಬಾರಿಗೆ  ತೃತೀಯ ಲಿಂಗಿಗಳಿಗಾಗಿ ಆಥ್ಲೆಟಿಕ್ ಕ್ರೀಡಾಕೂಟವನ್ನು ಯಾವ ರಾಜ್ಯದಲ್ಲಿ ಆಯೋಜಿಸಲಾಗಿತ್ತು?  
a) ಮಧ್ಯಪ್ರದೇಶ    b) ಚತ್ತೀಸ್‌ಗಢ 
c) ಕೇರಳ             d) ಬಿಹಾರ
 
9) ಇತ್ತೀಚೆಗೆ ಖ್ಯಾತ ಬಂಗಾಳಿ ಕವಿ, ವಿಮರ್ಶಕ ಶಂಖ ಘೋಷ್ ಅವರು  52ನೇ ಜ್ಞಾನಪೀಠ ಪ್ರಶಸ್ತಿಯನ್ನು ಸ್ವೀಕರಿಸಿದರು. ಅವರ ಕೃತಿಗಳನ್ನು ಕೆಳಕಂಡವುಗಳಲ್ಲಿ ಗುರುತಿಸಿ?
a)  ಅದಿಮ್ ಲತಾ ಗುಲ್ಮೋಮೆ     b) ಮುರ್ಖೊ ಬರೋ
c) ಸಾಮಾಜಿಕ್ ನೋಯಿ              d)  ಮೇಲಿನ ಎಲ್ಲವು 
 
 10)   2017ನೇ ಸಾಲಿನ ಏಷ್ಯಾ ಗ್ಲೋಬಲ್ ಎನ್ವಿರಾನ್ಮೆಂಟಲ್ ಪ್ರಶಸ್ತಿಯನ್ನು ಈಕೆಳಕಂಡ ಯಾರಿಗೆ ನೀಡಲಾಗಿದೆ.  
 a) ಮೇಧಾ ಪಾಟ್ಕರ್        b) ಪ್ರಪುಲ್ಲ ಚಂದ್ರ ಕುಮಾರ್  
c) ಪ್ರಪುಲ್ಲ ಸಮಂತ           d) ಸುರೇಶ್‌ ಹೆಬ್ಳೀಕರ್‌

ಉತ್ತರಗಳು: 1–b, 2–a, 3–c, 4–d, 5–a, 6–a, 7–a, 8–c,  9–d, 10–c 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.