ಜಗತ್ತಿನಲ್ಲಿ ಪ್ರತಿದಿನವು ಒಂದೊಂದು ವಿಶೇಷ ಘಟನೆಗಳು ಸಂಭವಿಸುತ್ತವೆ. ಭಾರತ ಕೂಡ ಪ್ರತಿದಿನ ವಿವಿಧ ಐತಿಹಾಸಿಕ ಘಟನೆಗಳಿಗೆ ಸಾಕ್ಷಿಯಾಗುತ್ತಲೇ ಇರುತ್ತದೆ. ಇಂದು ಅಕ್ಟೋಬರ್ 20. ಭಾರತದ ಐತಿಹಾಸಿಕ ದೃಷ್ಟಿಕೋನದಿಂದ ನೋಡಿದಾಗ ಈ ದಿನವು ಪ್ರಮುಖ ಎನಿಸಿಕೊಂಡಿದೆ. ಹಾಗಾದರೇ ಯಾವ ಕಾರಣಕ್ಕೆ ಈ ದಿನ ವಿಶೇಷ ಎನಿಸಿಕೊಂಡಿದೆ ಎಂಬುದನ್ನು ತಿಳಿಯೋಣ ಬನ್ನಿ.
1991: ಉತ್ತರಕಾಶಿ ಭೂಕಂಪ - 670 ಸಾವು
1991ರ ಅಕ್ಟೋಬರ್ 20ರಂದು ಉತ್ತರಕಾಶಿಯಲ್ಲಿ ಭೂಕಂಪ ಸಂಭವಿಸಿ ಸುಮಾರು 670 ಜನರು ಮೃತಪಟ್ಟರು. ಅ. 20ರ ಮಧ್ಯರಾತ್ರಿ 2:53ಕ್ಕೆ ಸಂಭವಿಸಿದ ಭೂಕಂಪನದ ತೀವ್ರತೆಯು ರಿಕ್ಟರ್ ಮಾಪನದಲ್ಲಿ 6.8ರಷ್ಟು ದಾಖಲಾಗಿತ್ತು. ಈ ಘಟನೆಯಿಂದ 5,000ಕ್ಕೂ ಹೆಚ್ಚು ಜನರು ಗಾಯಗೊಂಡರು. 3 ಲಕ್ಷಕ್ಕೂ ಹೆಚ್ಚು ಜನರು ನಿರಾಶ್ರಿತರಾದರು.
1992: ಜಿಂಬಾಬ್ವೆ ತಂಡದ ಮೊದಲ ಟೆಸ್ಟ್ ಶತಕ:
ಜಿಂಬಾಬ್ವೆ ತಂಡ 1992ರ ಅಕ್ಟೋಬರ್‌ನಲ್ಲಿ (18–22) ಮೊದಲ ಟೆಸ್ಟ್ ಪಂದ್ಯ ಆಡಿತ್ತು. ಭಾರತ ವಿರುದ್ಧ ನಡೆದ ಆ ಪಂದ್ಯದಲ್ಲಿ ಜಿಂಬಾಬ್ವೆ ನಾಯಕ ಡೇವಿಡ್ ಹಟನ್ ಅವರು ಇದೇ ದಿನ ಅಂದರೆ ಅಕ್ಟೋಬರ್ 20ರಂದು ಶತಕ ಬಾರಿಸಿದ್ದರು.
ಇದು ಜಿಂಬಾಬ್ವೆ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ದಾಖಲಾದ ಮೊದಲ ಶತಕವಾಗಿದೆ. ಈ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡಿತ್ತು. ಮೊದಲ ಡೇವಿಡ್ ಶತಕದ ನೆರವಿನಿಂದ ಜಿಂಬಾಬ್ವೆ ತಂಡ ಮೊದಲ ಇನಿಂಗ್ಸ್‌ನಲ್ಲಿ 456 ರನ್ ಗಳಿಸಿತ್ತು. ಭಾರತ 307 ರನ್‌ಗೆ ಆಲೌಟ್ ಆಗಿತ್ತು. ಎರಡನೇ ಇನಿಂಗ್ಸ್‌ನಲ್ಲಿ ಡೇವಿಡ್ ಪಡೆ 4 ವಿಕೆಟ್‌ಗೆ 146 ರನ್ ಆಗಿದ್ದಾಗ ಪಂದ್ಯ ಡ್ರಾ ಆಯಿತು.
1989: ಶಾರ್ಜಾ ಟ್ರೋಫಿ
1989ರ ಈ ದಿನ ನಡೆದ 'ಶಾರ್ಜಾ ಟ್ರೋಫಿ' ಕ್ರಿಕೆಟ್ ಟೂರ್ನಿಯ ಪಂದ್ಯದಲ್ಲಿ ಪಾಕಿಸ್ತಾನ ತಂಡ ಭಾರತದ ಎದುರು ಜಯ ಸಾಧಿಸಿತ್ತು. ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡವೂ ಭಾಗವಹಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.