ADVERTISEMENT

ಆಯ್ಕೆ ಸಮಿತಿ ನಿರ್ಧಾರ ಗೌರವಿಸುವೆ

ಪಿಟಿಐ
Published 11 ಜುಲೈ 2017, 19:30 IST
Last Updated 11 ಜುಲೈ 2017, 19:30 IST
ಆಯ್ಕೆ ಸಮಿತಿ ನಿರ್ಧಾರ ಗೌರವಿಸುವೆ
ಆಯ್ಕೆ ಸಮಿತಿ ನಿರ್ಧಾರ ಗೌರವಿಸುವೆ   

ನವದೆಹಲಿ: ‘ಶ್ರೀಲಂಕಾ ವಿರು ದ್ಧದ ಟೆಸ್ಟ್ ಸರಣಿಗೆ ನಾನು ಆಯ್ಕೆ ಯಾಗಿಲ್ಲ. ಆದರೆ ಆಯ್ಕೆ ಸಮಿತಿಯ ನಿರ್ಧಾರವನ್ನು  ಗೌರವಿಸುತ್ತೇನೆ. ಭಾರತ ‘ಎ’ ತಂಡದ ದಕ್ಷಿಣ ಆಫ್ರಿಕಾ ಪ್ರವಾಸ ದಲ್ಲಿ ನಾನು ಕಲಿಯುವುದು ಸಾಕಷ್ಟು ಇದೆ’ ಎಂದು ಕರ್ನಾಟಕದ ಬ್ಯಾಟ್ಸ್‌ ಮನ್ ಕರುಣ್ ನಾಯರ್ ಹೇಳಿದ್ದಾರೆ.

ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆಯಾದ ಭಾರತ ತಂಡದಲ್ಲಿ ಕರುಣ್ ನಾಯರ್ ಅವರ ಬದಲಿಗೆ ರೋಹಿತ್ ಶರ್ಮಾ ಅವರಿಗೆ ಸ್ಥಾನ ನೀಡಲಾಗಿತ್ತು. ದಕ್ಷಿಣ ಆಫ್ರಿಕಾದಲ್ಲಿ ನಡೆಯುವ ಸರಣಿಯಲ್ಲಿ ಕರುಣ್‌ ಭಾರತ ‘ಎ’ ತಂಡದ ಸಾರಥ್ಯವನ್ನು ವಹಿಸಲಿದ್ದಾರೆ.

‘ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ದಲ್ಲಿ ಆಡುವ ಅವಕಾಶ ಸಿಕ್ಕಿದೆ.  ಹೊಸ ಅನುಭವಗಳನ್ನು ಪಡೆದುಕೊಳ್ಳಲು ನಾನು ಉತ್ಸುಕನಾಗಿದ್ದೇನೆ. ಅಲ್ಲಿ ಉತ್ತಮವಾಗಿ ಆಡಿದರೆ ಭಾರತ ತಂಡಕ್ಕೆ ಮರಳಬಹುದು’ ಎಂದು ಬಲಗೈ ಬ್ಯಾಟ್ಸ್‌ಮನ್‌ ಹೇಳಿದ್ದಾರೆ.

ADVERTISEMENT

‘ಭಾರತ ತಂಡದಲ್ಲಿ ಆಡಿದ ಆರು ಟೆಸ್ಟ್ ಪಂದ್ಯಗಳಲ್ಲಿ 374 ರನ್ ದಾಖಲಿಸಿದ್ದೇನೆ. ಕೆಲವೊಮ್ಮೆ ಉತ್ತಮ ಆರಂಭ ಪಡೆದರೂ ಅದನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುವುದಿಲ್ಲ. ಆದರೆ ನನಗಿನ್ನೂ 25 ವರ್ಷ. ಮುಂದಿನ ದಿನಗಳಲ್ಲಿ ಅವಕಾಶ ಸಿಗುವ ಭರವಸೆ ಇದೆ’ ಎಂದು ಕರುಣ್ ಹೇಳಿದ್ದಾರೆ.

‘ಅವಕಾಶ ಸಿಗದಿರುವ ಬಗ್ಗೆ ಮಾತನಾಡಲು ಇದು ಸರಿಯಾದ ಸಮಯ ಅಲ್ಲ. ಸಿಕ್ಕಿರುವ ಅವಕಾಶವನ್ನು ಉತ್ತಮವಾಗಿ ಬಳಸಿಕೊಳ್ಳುವುದೇ ಜಾಣತನ’ ಎಂದು ಕರುಣ್ ಅಭಿಪ್ರಾಯಪಟ್ಟಿದ್ದಾರೆ.

‘ಕ್ರಿಕೆಟ್‌ನಲ್ಲಿ ಇರುವ ಸ್ಪರ್ಧೆಯನ್ನು ನೋಡಿದರೆ ನನಗೆ ಸಿಕ್ಕಿರುವ ಅವಕಾಶಗಳಿಂದಾಗಿ ನನಗೆ ತೃಪ್ತಿ ಇದೆ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.