ADVERTISEMENT

‘ಇಂಥ ಬ್ಯಾಟಿಂಗ್ ನಾನು ನೋಡಲೇ ಇಲ್ಲ’

ಪಿಟಿಐ
Published 11 ಮೇ 2018, 19:30 IST
Last Updated 11 ಮೇ 2018, 19:30 IST
ದಿಲೀಪ್‌ ವೆಂಗ್‌ಸರ್ಕಾರ್‌
ದಿಲೀಪ್‌ ವೆಂಗ್‌ಸರ್ಕಾರ್‌   

ಮುಂಬೈ: ಸನ್‌ರೈಸರ್ಸ್ ಹೈದರಾಬಾದ್ ಎದುರು ಸ್ಫೋಟಕ ಶತಕ ಸಿಡಿಸಿದ ರಿಷಭ್ ಪಂತ್ ಅವರನ್ನು ಮನಸಾರೆ ಕೊಂಡಾಡಿರುವ ಹಿರಿಯ ಕ್ರಿಕೆಟಿಗ ದಿಲೀಪ್‌ ವೆಂಗ್‌ಸರ್ಕಾರ್‌ ‘ಇಂಥ ಬ್ಯಾಟಿಂಗ್ ನಾನು ಜೀವನದಲ್ಲಿ ಎಂದೂ ನೋಡಲಿಲ್ಲ’ ಎಂದಿದ್ದಾರೆ.

ಪಂದ್ಯದಲ್ಲಿ ಅಪೂರ್ವ ಬ್ಯಾಟಿಂಗ್ ಮಾಡಿದ ಪಂತ್‌ ವೇಗಿ ಭುವನೇಶ್ವರ್‌ ಕುಮಾರ್ ಹಾಕಿದ ಕೊನೆಯ ಓವರ್‌ನಲ್ಲಿ ಚೆಂಡನ್ನು ಸ್ಕೂಪ್ ಮಾಡಿ ಥರ್ಡ್‌ಮ್ಯಾನ್‌ ಮೇಲಿಂದ ಸಿಕ್ಸರ್‌ಗೆ ಎತ್ತಿದ್ದರು. ‘ಗುರುವಾರ ಪಂತ್ ಆಡಿದ ರೀತಿ ಅದ್ಭುತವಾಗಿತ್ತು. ಅವರೇ ರೂಢಿಸಿಕೊಂಡ ವಿಶಿಷ್ಟ  ಹೊಡೆತಗಳು ಈ ಇನಿಂಗ್ಸ್‌ನಲ್ಲಿ ಇದ್ದವು’ ಎಂದು ರಾಷ್ಟ್ರೀಯ ಶಾಲಾ ಕ್ರಿಕೆಟ್ ಲೀಗ್‌ನಲ್ಲಿ ಪಾಲ್ಗೊಂಡ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT