ADVERTISEMENT

ಉಗಾಂಡ ಸಂಸತ್ತಿನಲ್ಲಿ ಸ್ಟೀಫನ್ ಕಿಪ್ರೊಟಿಚ್‌ಗೆ ಸನ್ಮಾನ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2012, 19:30 IST
Last Updated 17 ಆಗಸ್ಟ್ 2012, 19:30 IST

ಕೆಂಪಾಲ, ಉಗಾಂಡ (ಐಎಎನ್‌ಎಸ್): ಲಂಡನ್ ಒಲಿಂಪಿಕ್ಸ್‌ನ ಪುರುಷರ ಮ್ಯಾರಥಾನ್‌ನಲ್ಲಿ ಚಿನ್ನ ಗೆದ್ದ ಸ್ಟೀಫನ್ ಕಿಪ್ರೊಟಿಚ್ ಅವರನ್ನು ಉಗಾಂಡ ಸಂಸತ್‌ನಲ್ಲಿ ವಿಶೇಷ ಅಧಿವೇಶನ ನಡೆಸಿ ಅಭಿನಂದಿಸಲಾಗಿದೆ.

ಅಂತರರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಳ್ಳುವ ಕ್ರೀಡಾಪಟುಗಳಿಗೆ ತಿಂಗಳ ಭತ್ಯೆ ನೀಡಲು ಈ ಸಂದರ್ಭದಲ್ಲಿ ತೀರ್ಮಾನಿಸಲಾಯಿತು. ಬಜೆಟ್‌ನಲ್ಲಿ ಕ್ರೀಡೆಗಾಗಿ ಹೆಚ್ಚು ಹಣ ಮೀಸಲಿರಿಸಬೇಕು ಎಂದು ಸ್ಪೀಕರ್ ರೆಬೆಕಾ ಕಡಗಾ ನುಡಿದರು.

ಈಗಾಗಲೇ ಈ ದೇಶದ ಅಧ್ಯಕ್ಷ ಯೊವೇರಿ ಮುಸೆವೆನಿ ಪದಕ ವಿಜೇತ ಕಿಪ್ರೊಟಿಚ್‌ಗೆ 37 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಿದ್ದಾರೆ. ಅಷ್ಟು ಮಾತ್ರವಲ್ಲದೇ, ಈ ಮೊದಲು ಮನವಿ ಮಾಡಿದಂತೆ ಕಿಪ್ರೊಟಿಚ್ ಅವರ ಪೋಷಕರಿಗೆ ಮೂರು ಬೆಡ್‌ರೂಮ್ ಇರುವ ಮನೆಯೊಂದನ್ನು ಕಟ್ಟಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

40 ವರ್ಷಗಳ ಬಳಿಕ ಉಗಾಂಡ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. 1972ರ ಮ್ಯೂನಿಕ್ ಒಲಿಂಪಿಕ್ಸ್‌ನಲ್ಲಿ ಈ ದೇಶದ ಜಾನ್ ಅಕಿ ಬುವಾ 400 ಮೀಟರ್ಸ್‌ ಹರ್ಡಲ್ಸ್‌ನಲ್ಲಿ ಚಿನ್ನ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.