ಸಾಮಾನ್ಯ ಪಂದ್ಯವಲ್ಲ ಇದು. ಎಲ್ಲರೂ ಆಸಕ್ತಿಯಿಂದ ಈ ಹಣಾಹಣಿಯ ಕಡೆಗೆ ನೋಡುತ್ತಿದ್ದಾರೆ. ಭಾರತ ಹಾಗೂ ದಕ್ಷಿಣ ಆಫ್ರಿಕಾ ಮುಖಾಮುಖಿ ರೋಚಕವೆಂದು ಖಂಡಿತ ನಿರೀಕ್ಷಿಸಬಹುದು. ಉಭಯ ತಂಡಗಳಿಗೆ ಖಂಡಿತವಾಗಿಯೂ ಸತ್ವಪರೀಕ್ಷೆಯ ಪಂದ್ಯ. ಇಂಗ್ಲೆಂಡ್ ಎದುರು ಚೆನ್ನೈನಲ್ಲಿ ಗೆಲ್ಲುವ ಸ್ಥಿತಿಯಲ್ಲಿದ್ದು, ಕೊನೆಯಲ್ಲಿ ನಿರಾಸೆ ಹೊಂದಿದ ದಕ್ಷಿಣ ಆಫ್ರಿಕಾ ತಕ್ಕ ಪಾಠವನ್ನು ಕಲಿತಿದೆ. ಐವತ್ತು ಓವರುಗಳವರೆಗೆ ಆಡುವುದು ಸಾಧ್ಯವಾಗುವಂತೆ ಎಚ್ಚರಿಕೆ ವಹಿಸುವುದೂ ಅದರ ಯೋಚನೆ.
ದೋನಿ ಬಳಗವು ತನ್ನ ನಾಡಿನ ಪ್ರೇಕ್ಷಕರ ನಿರೀಕ್ಷೆ ಹುಸಿಯಾಗದಂತೆ ಆಡಬೇಕು. ಗೆಲುವಿನ ಹಾದಿಯಲ್ಲಿ ಸಾಗಬೇಕು. ಇಂಥ ನಿರೀಕ್ಷೆಯ ಹೊರೆಯಿಂದಾಗಿ ಒತ್ತಡದಲ್ಲಿ ಸಿಲುಕುವುದು ಸಹಜ. ಪ್ರತಿ ಸೋಲು ಹಾಗೂ ಜಯದ ಲೆಕ್ಕಾಚಾರವು ವಿಶ್ವಕಪ್ ಮುಗಿದ ನಂತರದ ಪರಿಸ್ಥಿತಿ ಏನಾಗಿರುತ್ತದೆ ಎನ್ನುವುದರ ಮೇಲೆ ಪರಿಣಾಮ ಬೀರುತ್ತದೆ. ಆದ್ದರಿಂದ ಈ ಅಂಶದ ಕಡೆಗೂ ಆತಿಥೇಯರು ಗಮನ ನೀಡಿ ಎಚ್ಚರಿಕೆಯಿಂದ ಹೆಜ್ಜೆ ಇಟ್ಟು ಮುಂದೆ ಸಾಗಬೇಕು.
-ಗೇಮ್‌ಪ್ಲಾನ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.