ADVERTISEMENT

ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2017, 6:49 IST
Last Updated 13 ಡಿಸೆಂಬರ್ 2017, 6:49 IST
ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು
ಎರಡನೇ ಏಕದಿನ ಪಂದ್ಯ: ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡ ಶ್ರೀಲಂಕಾ; ತಾಳ್ಮೆಯ ಆಟ ಪ್ರದರ್ಶಿಸುತ್ತಿರುವ ಭಾರತೀಯ ಬ್ಯಾಟ್ಸ್‌ಮನ್‌ಗಳು   

ಮೊಹಾಲಿ: ಪಂಜಾಬ್‌ ಕ್ರಿಕೆಟ್‌ ಸಂಸ್ಥೆಯ ಅಂಗಳದಲ್ಲಿ ಬುಧವಾರ ಆರಂಭಗೊಂಡಿರುವ  ಭಾರತ–ಶ್ರೀಕಂಕಾ ಏಕದಿನ ಕ್ರಿಕೆಟ್‌ ಸರಣಿಯ ಎರಡನೇ ಪಂದ್ಯದಲ್ಲಿ ಟಾಸ್‌ ಗೆದ್ದ ಶ್ರೀಲಂಕಾ ಫೀಲ್ಡಿಂಗ್‌ ಆಯ್ಕೆ ಮಾಡಿಕೊಂಡಿದೆ.

ಧರ್ಮಶಾಲಾ ಅಂಗಳದಲ್ಲಿ ಸಿಂಹಳೀಯ ನಾಡಿನ ತಂಡ ಟೀಂ ಇಂಡಿಯಾಗೆ ಸೋಲಿನ ರುಚಿ ತೋರಿಸಿತ್ತು. ಬ್ಯಾಟಿಂಗ್‌ ವೈಫಲ್ಯ ಅನುಭವಿಸಿದ್ದ ತಂಡ ಇಂದು ತಾಳ್ಮೆಯುತ ಆಟ ಪ್ರದರ್ಶಿಸುತ್ತಿದ್ದು, 11 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 48 ರನ್‌ ಗಳಿಸಿದೆ.

ಸರಣಿ ಜಯದ ಕನಸು ಜೀವಂತವಾಗಿಟ್ಟುಕೊಳ್ಳಬೇಕಾದರೆ ಈ ಹೋರಾಟದಲ್ಲಿ ಆತಿಥೇಯರು ಗೆಲ್ಲಲೇಬೇಕು. ಹೀಗಾಗಿ ಇದು ರೋಹಿತ್‌ ಶರ್ಮಾ ಪಡೆಯ ಪಾಲಿಗೆ ‘ಮಾಡು ಇಲ್ಲವೇ ಮಡಿ’ ಪೈಪೋಟಿಯಾಗಿದೆ.

ADVERTISEMENT

ಏಕದಿನ ಮಾದರಿಯಲ್ಲಿ ಎರಡು ದ್ವಿಶತಕ ಸಿಡಿಸಿರುವ ಏಕೈಕ ಬ್ಯಾಟ್ಸ್‌ಮನ್‌ ಎಂಬ ದಾಖಲೆ ಹೊಂದಿರುವ ರೋಹಿತ್‌, ಧರ್ಮಶಾಲಾದಲ್ಲಿ ಕೇವಲ ಎರಡು ರನ್‌ ಗಳಿಸಿ ಪೆವಿಲಿಯನ್‌ ಸೇರಿಕೊಂಡಿದ್ದರು. ಸ್ಫೋಟಕ ಆಟಕ್ಕೆ ಹೆಸರಾಗಿರುವ ಎಡಗೈ ಬ್ಯಾಟ್ಸ್‌ಮನ್‌ ಶಿಖರ್‌ ಧವನ್‌ ಸೊನ್ನೆ ಸುತ್ತಿದ್ದರು. ಇದೇ ಜೋಡಿ ಆರಂಭಿಕರಾಗಿ  ಕಣಕ್ಕಿಳಿದಿದ್ದು, ರೋಹಿತ್‌(19), ಧವನ್‌(28) ತಾಳ್ಮೆಯ ಆಟ ಪ್ರದರ್ಶಿಸುತ್ತಿದ್ದಾರೆ.

ಪ್ರಸ್ತುತ ಸ್ಕೋರ್‌:
11 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 48 ರನ್‌
ರೋಹಿತ್‌ ಶರ್ಮಾ –19
ಶಿಖರ್‌ ಧವನ್‌– 28

* ವಾಷಿಂಗ್ಟನ್‌ ಸುಂದರ್‌ಗೆ ಮೊದಲ ಅಂತರರಾಷ್ಟ್ರೀಯ ಏಕದಿನ ಪಂದ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.