ADVERTISEMENT

ಎಲ್ಲರ ಬೆಂಬಲ ಪ್ರೇರಣೆ ನೀಡಿದೆ: ರಹಾನೆ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2012, 19:30 IST
Last Updated 18 ಏಪ್ರಿಲ್ 2012, 19:30 IST

ಜೈಪುರ (ಪಿಟಿಐ): ಎಲ್ಲಾ ಕಡೆಯಿಂದ ಸಿಗುತ್ತಿರುವ ಬೆಂಬಲ ಉತ್ತಮ ಪ್ರದರ್ಶನ ನೀಡಲು ಪ್ರೇರಣೆಯಾಗಿದೆ ಎಂದು ಈ ಬಾರಿಯ ಐಪಿಎಲ್‌ನಲ್ಲಿ ಶತಕ ಗಳಿಸಿರುವ ಏಕೈಕ ಆಟಗಾರ ರಾಜಸ್ತಾನ ರಾಯಲ್ಸ್‌ನ ಅಜಿಂಕ್ಯ ರಹಾನೆ ನುಡಿದಿದ್ದಾರೆ.

ಸುನಿಲ್ ಗಾವಸ್ಕರ್ ಸೇರಿದಂತೆ ಪ್ರಮುಖರು ರಹಾನೆ ಪ್ರದರ್ಶನವನ್ನು ಶ್ಲಾಘಿಸಿದ್ದಾರೆ. ರಾಹುಲ್ ದ್ರಾವಿಡ್ ಅವರ ಸ್ಥಾನ ತುಂಬಬಲ್ಲ ಆಟಗಾರ ಎಂದು ಹೇಳುತ್ತಿದ್ದಾರೆ.

`ಈ ರೀತಿಯ ಶ್ಲಾಘನೆ ನನ್ನ ಮೇಲೆ ಹೆಚ್ಚಿನ ಒತ್ತಡಕ್ಕೆ ಕಾರಣವಾಗುತ್ತಿವೆ ಎನಿಸುವುದಿಲ್ಲ. ಬದಲಾಗಿ ಆ ಮಾತುಗಳು ಸ್ಫೂರ್ತಿ ನೀಡುತ್ತಿವೆ. ಈ ಪ್ರದರ್ಶವನ್ನು  ನಾನು ಮುಂದುವರಿಸಬೇಕು. ಏಕೆಂದರೆ ನನಗೆ ಇದೊಂದು ಸವಾಲಿನ ವಿಷಯ~ ಎಂದು ರಹಾನೆ ತಿಳಿಸಿದ್ದಾರೆ.ಐಪಿಎಲ್ ಐದನೇ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರ ರಹಾನೆ. ಹಾಗಾಗಿ ಅವರೀಗ `ಆರೇಂಜ್ ಕ್ಯಾಪ್~ ಹೊಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.