ADVERTISEMENT

ಐದು ವಿಕೆಟ್ ಲಭಿಸಿದ್ದು ತೃಪ್ತಿ ನೀಡಿದೆ: ಓಜಾ

​ಪ್ರಜಾವಾಣಿ ವಾರ್ತೆ
Published 17 ನವೆಂಬರ್ 2012, 19:30 IST
Last Updated 17 ನವೆಂಬರ್ 2012, 19:30 IST

ಅಹಮದಾಬಾದ್: `ಇಂಗ್ಲೆಂಡ್ ಎದುರಿನ ಈ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಲಭಿಸಿದ್ದು ನನಗೆ ತೃಪ್ತಿ ನೀಡಿದೆ. ನಾನು ಬೌಲಿಂಗ್ ಮಾಡುತ್ತಿರುವ ರೀತಿ ಕೂಡ ಖುಷಿ ಕೊಡುತ್ತಿದೆ. ಇದು ನಾಲ್ಕು ಪಂದ್ಯಗಳ ಸರಣಿ. ಹಾಗಾಗಿ ನಾನು ಕಠಿಣ ಪ್ರಯತ್ನ ಹಾಕಬೇಕಾಗಿದೆ~ ಎಂದು ಭಾರತ ತಂಡದ ಎಡಗೈ ಸ್ಪಿನ್ನರ್ ಪ್ರಗ್ಯಾನ್ ಓಜಾ ನುಡಿದಿದ್ದಾರೆ.

`ಕೆವಿನ್ ಪೀಟರ್ಸನ್ ವಿಕೆಟ್ ಹೆಚ್ಚು ಖುಷಿ ನೀಡಿತು. ಇಂಗ್ಲೆಂಡ್ ಉತ್ತಮ ಆಟಗಾರರನ್ನು ಒಳಗೊಂಡಿರುವ ತಂಡ. ಹಾಗಾಗಿ ನಮ್ಮ ಮುಂದೆ ದೊಡ್ಡ ಸವಾಲಿದೆ. ಭಾನುವಾರದ ನಾಲ್ಕನೇ ದಿನದಾಟದ ಮೊದಲ ಅವಧಿ ನಮ್ಮ ಪಾಲಿಗೆ ತುಂಬಾ ಮಹತ್ವ ಪಡೆದಿದೆ. ಈ ಪಂದ್ಯ ಗ್ಲ್ಲೆಲುವ ವಿಶ್ವಾಸವಿದೆ~ ಎಂದು ಅವರು ಹೇಳಿದರು.
`ನನ್ನ ಬಗ್ಗೆ ಬೇರೆಯವರು ಏನು ಟೀಕೆ ಮಾಡುತ್ತಾರೆ ಎಂಬುದರ ಬಗ್ಗೆ ಯೋಚಿಸುವುದಿಲ್ಲ. ನನ್ನ ಕೆಲಸ ಉತ್ತಮ ಪ್ರದರ್ಶನ ನೀಡುವುದು. ಭಾರತ ತಂಡದ ಗೆಲುವಿಗೆ ಪ್ರಯತ್ನಿಸುವುದು~ ಎಂದರು.


ಓಜಾ 17 ಟೆಸ್ಟ್ ಪಂದ್ಯಗಳಿಂದ 80 ವಿಕೆಟ್ ಕಬಳಿಸಿದ್ದಾರೆ. ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಹಿಂದಿನ ಎಡಗೈ ಬೌಲರ್‌ಗಳೆಂದರೆ ಬಿಷನ್ ಸಿಂಗ್ ಬೇಡಿ (266), ವಿನೂ ಮಂಕಡ್ (162), ರವಿಶಾಸ್ತ್ರಿ (151) ಹಾಗೂ ದಿಲೀಪ್ ದೋಶಿ (114).

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT