ADVERTISEMENT

ಒಟಾಗೊಗೆ ಭರ್ಜರಿ ಜಯ

ಚಾಂಪಿಯನ್ಸ್‌ ಲೀಗ್‌ ಕ್ರಿಕೆಟ್‌: ನೀಲ್‌ ಬ್ರೂಮ್‌ ಆಕರ್ಷಕ ಶತಕ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST
ಚಾಂಪಿಯನ್ಸ್‌ ಲೀಗ್‌ ಟ್ವಿಂಟೆ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ ಶತಕ ಗಳಿಸಿದಾಗ ಒಟಾಗೊ ವೋಲ್ಟ್ಸ್‌ ತಂಡದ ನೀಲ್‌ ಬ್ರೂಮ್‌ ಸಂಭ್ರಮಿಸಿದ ಕ್ಷಣ
ಚಾಂಪಿಯನ್ಸ್‌ ಲೀಗ್‌ ಟ್ವಿಂಟೆ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬುಧವಾರ ಶತಕ ಗಳಿಸಿದಾಗ ಒಟಾಗೊ ವೋಲ್ಟ್ಸ್‌ ತಂಡದ ನೀಲ್‌ ಬ್ರೂಮ್‌ ಸಂಭ್ರಮಿಸಿದ ಕ್ಷಣ   

ಜೈಪುರ (ಐಎಎನ್‌ಎಸ್‌): ನೀಲ್‌ ಬ್ರೂಮ್‌ (117; 56 ಎ., 9 ಬೌಂ., 8 ಸಿ.,) ಅವರ ಅಮೋಘ ಶತಕದ ನೆರವಿನಿಂದ ಒಟಾಗೊ ವೋಲ್ಟ್ಸ್‌ ತಂಡದವರು ಇಲ್ಲಿ ನಡೆಯುತ್ತಿರುವ ಚಾಂಪಿಯನ್ಸ್‌ ಲೀಗ್‌ ಟ್ವೆಂಟಿ–20 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಪರ್ತ್‌ ಸ್ಕಾಚರ್ಸ್‌ ಎದುರು 62 ರನ್‌ಗಳ ಭರ್ಜರಿ ಗೆಲುವು ಸಾಧಿಸಿದರು.

ಸವಾಯ್‌ ಮಾನ್‌ಸಿಂಗ್‌ ಕ್ರೀಡಾಂ ಗಣ ದಲ್ಲಿ ಬುಧವಾರ ನಡೆದ ಈ ಪಂದ್ಯ ದಲ್ಲಿ ಮೊದಲು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ನ ಒಟಾಗೊ ವೋಲ್ಟ್ಸ್‌ 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 242 ರನ್‌ಗಳ ಭಾರಿ ಮೊತ್ತ ಗಳಿಸಿತು. ಈ ಗುರಿ ಬೆನ್ನಟ್ಟಿದ ಪರ್ತ್‌ ಸ್ಕಾಚರ್ಸ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 180 ರನ್‌ ಮಾತ್ರ ಪೇರಿಸಿತು.

ಟಾಸ್‌ ಗೆದ್ದ ಆಸ್ಟ್ರೇಲಿಯಾದ ಪರ್ತ್‌ ತಂಡದವರು ಒಟಾಗೊ ತಂಡವನ್ನು ಬ್ಯಾಟ್‌ ಮಾಡಲು ಆಹ್ವಾನಿಸಿದರು. ಜೊಯೆಲ್‌ ಪ್ಯಾರಿಸ್‌ ಮೂರನೇ ಓವರ್‌ನಲ್ಲಿ ಎರಡು ವಿಕೆಟ್‌ ಪಡೆದು ನಾಯಕನ ನಿರ್ಧಾರವನ್ನು ಸಮರ್ಥಿಸಿಕೊಂಡರು.

ಆದರೆ ಬ್ರೂಮ್‌ ಅವರ ಆಟ ಪರ್ತ್‌ ತಂಡದವರನ್ನು ಕಾಡಿದ ಪರಿ ಅಷ್ಟಿಷ್ಟಲ್ಲ. 9 ರನ್‌ಗಳಿಗೆ ಎರಡು ವಿಕೆಟ್‌ ಪತನವಾದರೂ ಆತಂಕಕ್ಕೆ ಒಳಗಾಗದ ಅವರು ಎದುರಾಳಿಯ ಬೌಲರ್‌ಗಳ ಮೇಲೆ ಪಾರಮ್ಯ ಮೆರೆದರು. ಬ್ರೂಮ್‌ ಮೂರನೇ ವಿಕೆಟ್‌ಗೆ ಡೆರೆಕ್‌ ಬೂರ್ಡರ್‌ (45) ಜೊತೆಗೂಡಿ 67 ರನ್‌ ಕಲೆಹಾಕಿದರು. ಬೂರ್ಡರ್‌ ವಿಕೆಟ್‌ ಪತನದ ನಂತರ ಕ್ರೀಸ್‌ಗೆ ಬಂದ ರ್‍್ಯಾನ್‌ ಡಾಶೆಟ್‌ (66; 26 ಎ., 3 ಬೌ., 6 ಸಿ.) ಕೂಡ ಅಬ್ಬರಿಸಲು ಶುರುವಿಚ್ಚಿಕೊಂಡರು.

ಬ್ರೂಮ್‌ ಜೊತೆಗೂಡಿದ ಅವರು ನಾಲ್ಕನೇ ವಿಕೆಟ್‌ಗೆ 128 ರನ್‌ ಸೇರಿಸಿ ದರು. ಇದು ಪಂದ್ಯಕ್ಕ ಹೊಸ ತಿರುವು ನೀಡಿತು. ರನ್‌ ನಿಯಂತ್ರಿಸಲು ಪರ್ತ್‌ ತಂಡ ನಡೆಸಿದ ಯಾವುದೇ ಪ್ರಯತ್ನ ಫಲಿಸಲಿಲ್ಲ.  ಬ್ರೂಮ್‌ ಶತಕದ ಅದ್ಭುತವಾಗಿತ್ತು. ಈ ಟೂರ್ನಿ ಯಲ್ಲಿ ಮೂಡಿಬಂದ ಮೊದಲ  ಶತಕವಿದು.

ಈ ಕಠಿಣ ಗುರಿ ಎದುರು ಪರ್ತ್‌ ಆರಂಭದಲ್ಲಿಯೇ ಆಘಾತಕ್ಕೆ ಒಳಗಾ ಯಿತು. ನಂತರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ಗಳು ನಡೆಸಿದ ಪ್ರಯತ್ನ ಸಾಕಾಗಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ಒಟಾಗೊ ವೋಲ್ಟ್ಸ್‌: 20 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 242 (ನೀಲ್‌ ಬ್ರೂಮ್‌ 117, ಡೆರೆಕ್‌ ಬೂರ್ಡರ್‌ 45, ಟೆನ್‌ ಡಾಶೆಟ್‌ 66; ಜೊಯೆಲ್‌ ಪ್ಯಾರಿಸ್‌ 50ಕ್ಕೆ2); ಪರ್ತ್‌ ಸ್ಕಾಚರ್ಸ್‌: 20 ಓವರ್‌ಗಳಲ್ಲಿ 6 ವಿಕೆಟ್‌ಗೆ 180 (ಆ್ಯಡಮ್‌  ವೋಗ್ಸ್‌ 36, ಹಿಲ್ಟನ್‌ ಕಾರ್ಟ್‌ರೈಟ್‌ ಔಟಾ ಗದೆ 69; ಇಯಾನ್‌ ಬಟ್ಲರ್‌ 47ಕ್ಕೆ3); ಫಲಿತಾಂಶ: ಒಟಾಗೊ ವೋಲ್ಟ್ಸ್‌ಗೆ 62 ರನ್‌ ಜಯ. ಪಂದ್ಯ ಶ್ರೇಷ್ಠ: ನೀಲ್‌ ಬ್ರೂಮ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.