ಯೂಜಿನ್ (ರಾಯಿಟರ್ಸ್): ಅತ್ಯುತ್ತಮ ಪ್ರದರ್ಶನ ನೀಡಿದ ಜಸ್ಟಿನ್ ಗ್ಯಾಟ್ಲಿನ್ ಮತ್ತು ಟೈಸನ್ ಗೇ ಲಂಡನ್ ಒಲಿಂಪಿಕ್ಸ್‌ನ 100 ಮೀ. ಓಟದಲ್ಲಿ ಅಮೆರಿಕವನ್ನು ಪ್ರತಿನಿಧಿಸಲು ಅರ್ಹತೆ ಪಡೆದಿದ್ದಾರೆ.
ಭಾನುವಾರ ನಡೆದ ಅಮೆರಿಕನ್ ಒಲಿಂಪಿಕ್ ಅರ್ಹತಾ ಕೂಟದಲ್ಲಿ ಗ್ಯಾಟ್ಲಿನ್ 9.80 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಅಗ್ರಸ್ಥಾನ ಪಡೆದರು. ಟೈಸನ್ ಗೇ 9.86 ಸೆಕೆಂಡ್‌ಗಳೊಂದಿಗೆ ಎರಡನೇ ಸ್ಥಾನ ಪಡೆದರು.
ಗ್ಯಾಟ್ಲಿನ್ ಅವರ ವೈಯಕ್ತಿಕ ಅತ್ಯುತ್ತಮ ಸಮಯ ಇದಾಗಿದೆ. ಈ ಮೂಲಕ ಇವರು ಜಮೈಕದ ಉಸೇನ್ ಬೋಲ್ಟ್‌ಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ.
ಪ್ರಸಕ್ತ ಋತುವಿನ ಎರಡನೇ ಅತ್ಯುತ್ತಮ ಸಮಯವನ್ನು ಗ್ಯಾಟ್ಲಿನ್ ಕಂಡುಕೊಂಡರು. ಬೋಲ್ಟ್ ಇತ್ತೀಚೆಗೆ ನಡೆದ ಸ್ಪರ್ಧೆಯೊಂದರಲ್ಲಿ 9.76 ಸೆಕೆಂಡ್‌ಗಳಲ್ಲಿ ಗುರಿ ತಲುಪಿದ್ದರು. ಗ್ಯಾಟ್ಲಿನ್ 2004ರ ಅಥೆನ್ಸ್ ಒಲಿಂಪಿಕ್ಸ್‌ನಲ್ಲಿ 9.85 ಸೆಕೆಂಡ್‌ಗಳಲ್ಲಿ ಓಡಿ ಚಿನ್ನ ಜಯಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.